ಸಾರಾಂಶ
ಕೋವಿಡ್‌ಗೆ ತಮ್ಮ ಕಂಪನಿ ಅಭಿವೃದ್ಧಿಪಡಿಸಿದ್ದ ಮೊದಲ ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್ ಸಂಪೂರ್ಣ ಸುರಕ್ಷಿತವಾಗಿದ್ದು, ಅದರಿಂದ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ ಎಂದು ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ.
ನವದೆಹಲಿ: ಕೋವಿಡ್‌ಗೆ ತಮ್ಮ ಕಂಪನಿ ಅಭಿವೃದ್ಧಿಪಡಿಸಿದ್ದ ಮೊದಲ ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್ ಸಂಪೂರ್ಣ ಸುರಕ್ಷಿತವಾಗಿದ್ದು, ಅದರಿಂದ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ ಎಂದು ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ.
ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ತಮ್ಮ ‘ಕೋವಿಶೀಲ್ಡ್’ ಲಸಿಕೆ ರಕ್ತಹೆಪ್ಪುಗಟ್ಟುವಿಕೆ ರೀತಿ ಹಲವು ಅಡ್ಡ ಪರಿಣಾಮ ಬೀರಿತ್ತು ಎಂದು ನ್ಯಾಯಾಲಯದ ಮುಂದೆ ಹೇಳಿದ ಬೆನ್ನಲೇ ಭಾರತ್ ಬಯೋಟೆಕ್ ಈ ಹೇಳಿಕೆ ನೀಡಿದೆ.ಈ ಕುರಿತು ಹೇಳಿಕೆ ನೀಡಿರುವ ಭಾರತ್ ಬಯೋಟೆಕ್, ಲಸಿಕೆ ತಯಾರಿಕೆ ವೇಳೆ ಸುರಕ್ಷತೆ ನಮ್ಮ ಮೊದಲ ಮತ್ತು ಗರಿಷ್ಠ ಆದ್ಯತೆಯಾಗಿತ್ತು. ನಂತರವಷ್ಟೇ ಲಸಿಕೆಯ ಪರಿಣಾಮವಾಗಿತ್ತು. ಹಲವು ಆಯಾಮಗಳಲ್ಲಿ ಪರೀಕ್ಷೆ ನಡೆಸಿದ ಭಾರತದ ಏಕೈಕ ಕೋವಿಡ್ ಲಸಿಕೆಯಾಗಿದ್ದು, 27,000 ಸ್ಯಾಂಪಲ್‌ಗಳ ಮೇಲೆ ಪರೀಕ್ಷೆ ನಡೆಸಲಾಗಿತ್ತು. ಲಸಿಕೆ ಪರವಾಗಿ ಪಡೆಯಲು ಹಲವು ಬಗೆಯ ಕ್ಲಿಷ್ಟ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣಗೊಂಡ ಬಳಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.