ಭಾರತ ವಿರೋಧಿ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೋಸ್‌ಗೆ ಜೋ ಬೈಡೆನ್‌ ಅಧ್ಯಕ್ಷೀಯ ಪದಕ

| Published : Jan 06 2025, 01:00 AM IST / Updated: Jan 06 2025, 04:29 AM IST

ಸಾರಾಂಶ

ಅದಾನಿ ಸಮೂಹದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಹಾಗೂ ಹಲವು ವಿಷಯಗಳಲ್ಲಿ ಭಾರತ ಸರ್ಕಾರ ವಿರೋಧಿ ಧೋರಣೆ ಪ್ರದರ್ಶಿಸಿ ಸುದ್ದಿಯಲ್ಲಿದ್ದ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೋಸ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಧ್ಯಕ್ಷೀಯ ಪದಕ ಪದವಿ ಪ್ರದಾನ ಮಾಡಲಾಯಿತು.

ವಾಷಿಂಗ್ಟನ್‌: ಅದಾನಿ ಸಮೂಹದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಹಾಗೂ ಹಲವು ವಿಷಯಗಳಲ್ಲಿ ಭಾರತ ಸರ್ಕಾರ ವಿರೋಧಿ ಧೋರಣೆ ಪ್ರದರ್ಶಿಸಿ ಸುದ್ದಿಯಲ್ಲಿದ್ದ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೋಸ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಧ್ಯಕ್ಷೀಯ ಪದಕ ಪದವಿ ಪ್ರದಾನ ಮಾಡಲಾಯಿತು. 

ಶ್ವೇತಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅಮೆರಿಕದ ವಿದೇಶಾಂಗ ಖಾತೆ ಮಾಜಿ ಸಚಿವೆ ಹಿಲರಿ ಕ್ಲಿಂಟನ್‌. ಅರ್ಜೆಂಟೀನಾದ ಖ್ಯಾತ ಫುಟ್ಬಾಲ್‌ ತಾರೆ ಲಯೋನಲ್‌ ಮೆಸ್ಸಿ ಸೇರಿ 19 ಮಂದಿಗೂ ಪ್ರಶಸ್ತಿ ನೀಡಲಾಯಿತು. 

ಆದರೆ ವೈಯಕ್ತಿಕ ಕಾರಣಗಳಿಂದ ಮೆಸ್ಸಿ ಹಾಜರಿರಲಿಲ್ಲ.ಅಮೆರಿಕದ ಅತ್ಯುನ್ನತ ಗೌರವವಾಗಿರುವ ಈ ಪದಕವನ್ನು ದೇಶದ ಸಮೃದ್ಧಿ, ಮೌಲ್ಯ, ರಕ್ಷಣೆಗೆ ಕೊಡುಗೆ ನೀಡಿದ, ವಿಶ್ವ ಶಾಂತಿ ಸ್ಥಾಪನೆ ಸೇರಿದಂತೆ ಸಮಾಜಕ್ಕೆ ಕೊಡುಗೆಗಳನ್ನು ನೀಡಿದವರಿಗೆ ನೀಡಲಾಗುತ್ತದೆ. ‘‘ಬಿಲಿಯನೇರ್ ಹೂಡಿಕೆದಾರ ಮತ್ತು ಓಪನ್ ಸೊಸೈಟಿ ಫೌಂಡೇಶನ್‌ನ ಸಂಸ್ಥಾಪಕ ಸೊರೊಸ್, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಜಾಗತಿಕ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ’ ಎಂದು ಶ್ಲಾಘಿಸಲಾಗಿದೆ.

ಇದಕ್ಕೆ ಅವರು ಪ್ರತಿಕ್ರಿಯಿಸಿ, ‘ಒಬ್ಬ ವಲಸಿಗನಾಗಿ ಬಂದು ಪ್ರಶಸ್ತಿ ಸ್ವೀಕರಿಸಿದ್ದು ಸಂತಸ ತಂದಿದೆ. ಅಮೆರಿಕಕ್ಕೆ ನಾನು ನೀಡಿದ ಕೊಡುಗೆ ಬಗ್ಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.ಮಸ್ಕ್ ಟೀಕೆ:

‘ಸೊರೋಸ್‌ ಒಬ್ಬ ಮಾನವೀಯತೆಯ ವಿರೋಧಿ. ಅವರಿಗೆ ಅಮೆರಿಕದ ಪ್ರಶಸ್ತಿ ನೀಡಿರುವುದು ಒಂದು ವಿಡಂಬನೆ’ ಎಂದು ಟೀಕಿಸಿದ್ದಾರೆ.