ನೀಟ್‌ ಹಗರಣ: ಇ.ಡಿ. ತನಿಖೆ ಸಂಭವ

| Published : Jun 23 2024, 02:04 AM IST / Updated: Jun 23 2024, 04:58 AM IST

ಸಾರಾಂಶ

ವೈದ್ಯಕೀಯ ಪ್ರವೇಶ ಪರೀಕ್ಷೆ ಆದ ನೀಟ್‌ನಲ್ಲಿ ಸಾಕಷ್ಟು ಹಣಕಾಸು ಅಕ್ರಮ ನಡೆದಿರುವ ಶಂಕೆ ಇರುವ ಕಾರಣ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

 ಪಟನಾ :   ವೈದ್ಯಕೀಯ ಪ್ರವೇಶ ಪರೀಕ್ಷೆ ಆದ ನೀಟ್‌ನಲ್ಲಿ ಸಾಕಷ್ಟು ಹಣಕಾಸು ಅಕ್ರಮ ನಡೆದಿರುವ ಶಂಕೆ ಇರುವ ಕಾರಣ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪರೀಕ್ಷಾ ಅಕ್ರಮ ನಡೆಸಿರುವ ರೂವಾರಿಗಳು ಪ್ರಶ್ನೆಪತ್ರಿಕೆ ಸೋರಿಕೆಗೆ 30-32 ಲಕ್ಷ ರು.ಗಳನ್ನು ವಿದ್ಯಾರ್ಥಿಗಳಿಂದ ಪಡೆದಿದ್ದರು ಎಂದು ಬಿಹಾರದಲ್ಲಿ ಬಂಧಿತರಾದ ಕೆಲವು ಆರೋಪಿಗಳಿಂದ ತಿಳಿದುಬಂದಿದೆ. ಹೀಗಾಗಿ ಕೋಟ್ಯಂತರ ರು. ಹಣವು ಈ ಅಕ್ರಮದಲ್ಲಿ ಹರಿದಾಡಿರುವ ಶಂಕೆ ಇದೆ. ಹೀಗಾಗಿ ಅಕ್ರಮ ಹಣ ವರ್ಗಾವಣೆಯ ಪ್ರಕರಣ ದಾಖಲಿಸಿಕೊಂಡು ಇ.ಡಿ. ತನಿಖೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈಗಾಗಲೇ ಬಿಹಾರ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಬಿಹಾರದಲ್ಲಿನ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ತನಿಖೆ ನಡೆಸುತ್ತಿದೆ.