ಟ್ವೀಟರ್‌ ಸೃಷ್ಟಿಸಿದ್ದ ಡೋರ್ಸಿ ಹೊಸ ಆ್ಯಪ್‌ ‘ಬಿಟ್‌ಚ್ಯಾಟ್‌’ : ವಾಟ್ಸಾಪ್‌ಗೆ ಪ್ರತಿಸ್ಪರ್ಧಿ

| N/A | Published : Jul 09 2025, 01:34 AM IST / Updated: Jul 09 2025, 04:24 AM IST

ಟ್ವೀಟರ್‌ ಸೃಷ್ಟಿಸಿದ್ದ ಡೋರ್ಸಿ ಹೊಸ ಆ್ಯಪ್‌ ‘ಬಿಟ್‌ಚ್ಯಾಟ್‌’ : ವಾಟ್ಸಾಪ್‌ಗೆ ಪ್ರತಿಸ್ಪರ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಸೇಜಿಂಗ್‌ ಜಗತ್ತಿನ ಅನಭಿಷಿಕ್ತ ದೊರೆಯಂತಿರುವ ವಾಟ್ಸಾಪ್‌ಗೆ ಪ್ರತಿಸ್ಪರ್ಧಿಯಾಗಿ, ಟ್ವೀಟರ್‌ನ ಸಹಸಂಸ್ಥಾಪಕ ಜಾಕ್‌ ಡೋರ್ಸಿ ‘ಬಿಟ್‌ಚ್ಯಾಟ್‌’ ಎಂಬ ಹೊಸ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

ವಾಷಿಂಗ್ಟನ್‌: ಮೆಸೇಜಿಂಗ್‌ ಜಗತ್ತಿನ ಅನಭಿಷಿಕ್ತ ದೊರೆಯಂತಿರುವ ವಾಟ್ಸಾಪ್‌ಗೆ ಪ್ರತಿಸ್ಪರ್ಧಿಯಾಗಿ, ಟ್ವೀಟರ್‌ನ ಸಹಸಂಸ್ಥಾಪಕ ಜಾಕ್‌ ಡೋರ್ಸಿ ‘ಬಿಟ್‌ಚ್ಯಾಟ್‌’ ಎಂಬ ಹೊಸ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

ಬ್ಲಾಕ್‌ನ ಸಿಇಒ ಕೂಡ ಆಗಿರುವ ಜಾಕ್‌ ಅವರ ಈ ಆ್ಯಪ್‌ ಇಂಟರ್‌ನೆಟ್‌ ಸಂಪರ್ಕ, ವೈಫೈ, ಸರ್ವರ್‌, ದೂರವಾಣಿ ಸಂಖ್ಯೆ, ಇಮೇಲ್‌ ಇಲ್ಲದೆ, ಕೇವಲ ಬ್ಲ್ಯೂಟೂಥ್‌ ಬಳಸಿ ಕೆಲಸ ಮಾಡುತ್ತದೆ. ಇದು ಸದ್ಯ ಪರೀಕ್ಷಾ ಹಂತದಲ್ಲಿದೆ.

ಸಾಮಾನ್ಯವಾಗಿ ಬ್ಲ್ಯೂಟೂಥ ಬಳಸಿಕೊಂಡು ಸಮೀಪದಲ್ಲಿರುವ ಉಪಕರಣಗಳನ್ನು ಮಾತ್ರ ಸಂಪರ್ಕಿಸಲು ಸಾಧ್ಯ. ಆದರೆ ಈ ಆ್ಯಪ್‌ನಲ್ಲಿ ಸಂದೇಶ ರವಾನಿಸುವ ಮತ್ತು ಪಡೆಯುವ ಮೊಬೈಲ್‌ಗಳು ದೂರದಲ್ಲಿದ್ದರೂ, ಸಂವಹನಕ್ಕೆ ಯಾವುದೇ ತೊಡಕಾಗದು ಎನ್ನಲಾಗಿದೆ.

ಈ ಆ್ಯಪ್‌ನಿಂದ ಇಂಟರ್‌ನೆಟ್‌ ಇಲ್ಲದ ಸಂದರ್ಭಗಳಲ್ಲಿ ಅಥವಾ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸಲು ಬಳಸಬಹುದಾಗಿದೆ. ಮುಂದಿನ ದಿನಗಳಲ್ಲಿ ವೈಫೈ ಸಂಪರ್ಕದೊಂದಿಗೆ ಸಂದೇಶ ರವಾನೆಗೆ ವೇಗ ಕೊಡುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ.

Read more Articles on