ಬಿಜೆಪಿ 4ನೇ ಪಟ್ಟಿಯಲ್ಲಿ ನಟಿ ರಾಧಿಕಾ ಶರತ್‌ಕುಮಾರ್‌ಗೆ ಟಿಕೆಟ್‌

| Published : Mar 23 2024, 01:00 AM IST / Updated: Mar 23 2024, 03:12 PM IST

ಬಿಜೆಪಿ 4ನೇ ಪಟ್ಟಿಯಲ್ಲಿ ನಟಿ ರಾಧಿಕಾ ಶರತ್‌ಕುಮಾರ್‌ಗೆ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿನ ವಿರುಧುನಗರದಿಂದ ರಾಧಿಕಾ ಶರತ್‌ಕುಮಾರ್‌ ಬಿಜೆಪಿಯಿಂದ ಸ್ಪರ್ಧೆ ಮಾಡಲಿದ್ದು, ಅವರಿಗೆ ನಟ ವಿಜಯಕಾಂತ್‌ ಪುತ್ರ ಎದುರಾಳಿಯಾಗುವ ಸಾಧ್ಯತೆಯಿದೆ.

ಚೆನ್ನೈ: ಲೋಕಸಭಾ ಚುನಾವಣೆಗೆ ಬಿಜೆಪಿಯು 15 ಮಂದಿಯ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕನ್ನಡದ ಪ್ರಚಂಡ ಕುಳ್ಳ ಚಿತ್ರದಲ್ಲಿ ಪುಷ್ಪ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟಿ ರಾಧಿಕಾ ಶರತ್‌ಕುಮಾರ್‌ ಅವರಿಗೆ ವಿರುಧುನಗರದಿಂದ ಟಿಕೆಟ್‌ ನೀಡಿದೆ. 

ಇತ್ತೀಚೆಗಷ್ಟೇ ಆಕೆಯ ಪತಿ ಶರತ್‌ಕುಮಾರ್‌ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ್ದರು. ಈ ಕ್ಷೇತ್ರದಲ್ಲಿ ಅವರಿಗೆ ನಟ ವಿಜಯಕಾಂತ್‌ ಅವರ ಮಗ ಷಣ್ಮುಗ ಪಾಂಡ್ಯನ್ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ. 

ಅಲ್ಲದೆ ಬಿಜೆಪಿಯು ಪುದುಚೇರಿಯಿಂದ ನಮಃಶಿವಾಯಂ ಅವರಿಗೆ ಟಿಕೆಟ್‌ ನೀಡಿದ್ದರೆ ಉಳಿದ 14 ತಮಿಳುನಾಡು ರಾಜ್ಯದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.