4 ಚುನಾವಣಾ ರಾಜ್ಯಗಳಿಗೆ ಬಿಜೆಪಿ ಉಸ್ತುವಾರಿ ನೇಮಕ

| Published : Jun 18 2024, 12:52 AM IST / Updated: Jun 18 2024, 05:28 AM IST

bjp flag
4 ಚುನಾವಣಾ ರಾಜ್ಯಗಳಿಗೆ ಬಿಜೆಪಿ ಉಸ್ತುವಾರಿ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆ ಚುನಾವಣೆಗೆ ಈಗಿಂದಲೇ ಸಿದ್ಧತೆ ಶುರು ಮಾಡುವ ಸಲುವಾಗಿ ಬಿಜೆಪಿ ಜಾರ್ಖಂಡ್‌, ಹರಿಯಾಣ,ಮಹಾರಾಷ್ಟ್ರ ಮತ್ತು ಜಮ್ಮು-ಕಾಶ್ಮೀರಕ್ಕೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ.

ನವದೆಹಲಿ: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ವರ್ಷಾಂತ್ಯದ ಒಳಗೆ ನಡೆಯಲಿರುವ ವಿಧಾನಸಭೆ ಚುನಾವಣೆಗಳತ್ತ ಬಿಜೆಪಿ ಕಣ್ಣಿಟ್ಟಿದೆ. ಜಾರ್ಖಂಡ್‌, ಹರಿಯಾಣ,ಮಹಾರಾಷ್ಟ್ರ ಮತ್ತು ಜಮ್ಮು-ಕಾಶ್ಮೀರಕ್ಕೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ.

ಬಿಜೆಪಿ ಪಾಲಿಗೆ ಪ್ರಮುಖ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು, ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್‌ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಿದೆ.

ಹರ್ಯಾಣಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾರಿಯನ್ನಾಗಿ ತ್ರಿಪುರ ಮಾಜಿ ಸಿಎಂ ಬಿಪ್ಲಬ್‌ ಕುಮಾರ್ ದೇಬ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ.

ಜಾರ್ಖಂಡ್‌ಗೆ ಮಧ್ಯಪ್ರದೇಶ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಚುನಾವಣಾ ಉಸ್ತುವಾರಿಯಾಗಿದ್ದು, ಅಸ್ಸಾಂ ಸಿಎಂ ಹೇಮಂತ್ ಬಿಸ್ವ ಶರ್ಮಾ ಸಹ ಉಸ್ತುವಾರಿಯಾಗಿ ಸಾಥ್‌ ನೀಡಲಿದ್ದಾರೆ.

ಜಮ್ಮು ಕಾಶ್ಮೀರದ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ನಿರ್ವಹಿಸಲಿದ್ದಾರೆ.