ನಟಿ ಹಾಗೂ ಪಕ್ಷೇತರ ಸಂಸದೆ ನವನೀತ್‌ ರಾಣಾ ಅವರಿಗೆ ಈ ಸಲ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಲಭಿಸಿದೆ.

ನವದೆಹಲಿ: ನಟಿ ಹಾಗೂ ಪಕ್ಷೇತರ ಸಂಸದೆ ನವನೀತ್‌ ರಾಣಾ ಅವರಿಗೆ ಈ ಸಲ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಲಭಿಸಿದೆ.

ಪಕ್ಷೇತರಳಾಗಿದ್ದರೂ ಮೋದಿ ಪರ ನಿಲುವು ಹೊಂದಿದ್ದ ನವನೀತ್‌, ಠಾಕ್ರೆ ಶಿವಸೇನೆ ವಿರುದ್ಧ ‘ಹನುಮಾನ್‌ ಚಾಲೀಸಾ ಪಠಣ’ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದರು. ಈ ಹಿಂದಿನ ಚುನಾವಣೆಯಲ್ಲಿ ಹಾಲಿ ಶಿಂಧೆ ಶಿವಸೇನಾ ಮುಖಂಡ ಆನಂದರಾವ್‌ ಅಡಸೂಲ್ ವಿರುದ್ಧ ಗೆದ್ದಿದ್ದರು.ಈ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಸೇನೆ ಮೈತ್ರಿ ಅಭ್ಯರ್ಥಿ ಆಗಿ ಅಡಸೂಲ್‌ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಆದರೆ ಈಗ ಟಿಕೆಟ್‌ ನವನೀತ್‌ ಪಾಲಾಗಿದೆ.ಹರ್ಯಾಣ ಸಿಎಂಗೆ ಟಿಕೆಟ್:ಈ ನಡುವೆ ಇತ್ತೀಚೆಗೆ ಹರ್ಯಾಣ ಸಿಎಂ ಆದ ನಯಬ್‌ ಸಿಂಗ್‌ ಸೈನಿ ಅವರಿಗೆ ಕರ್ನಾಲ್‌ ವಿಧಾನಸಭೆ ಉಪಚುನಾವಣೆಯ ಬಜೆಪಿ ಟಿಕೆಟ್‌ ಘೋಷಣೆ ಆಗಿದೆ.