ಸಾರಾಂಶ
ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಇಂಡಿಯಾ ಟೀವಿ-ಸಿಎನ್‌ಎಕ್ಸ್ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಎನ್‌ಡಿಎ 378 ಹಾಗೂ ತೃಣಮೂಲ ಕಾಂಗ್ರೆಸ್ ಹೊರತಾದ ಇಂಡಿಯಾ ಕೂಟ 98 ಸ್ಥಾನ ಪಡೆಯಲಿವೆ ಎಂದು ಭವಿಷ್ಯ ನುಡಿದಿವೆ.
ಈ ಪೈಕಿ ಬಿಜೆಪಿ 335 ಸ್ಥಾನ ಪಡೆಯಲಿದ್ದು, ಕಳೆದ ಸಲಕ್ಕಿಂತ 32 ಸ್ಥಾನ ಹೆಚ್ಚು ಸಂಪಾದಿಸಲಿದೆ. ಕಳೆದ ಸಲ 52 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಸಲ ಕೇವಲ 37ಕ್ಕೆ ಕುಸಿದು, ಈವರೆಗಿನ ಅತಿ ಕಳಪೆ ಸಾಧನೆ ಪ್ರದರ್ಶಿಸಲಿದೆ.
ಅದು ಬಿಟ್ಟರೆ ತೃಣಮೂಲ ಕಾಂಗ್ರೆಸ್ 21 ಸ್ಥಾನ ಪಡೆದು 3ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ.ಫೆ.5ರಿಂದ 23ವರೆಗೆ 1,62,900 ಜನರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಇಂಡಿಯಾ ಟೀವಿ ಹೇಳಿದೆ.
ಕರ್ನಾಟಕದಲ್ಲಿ ಬಿಜೆಪಿಗೆ 22, ಜೆಡಿಎಸ್‌ಗೆ 2, ಕೈಗೆ 4
ಕರ್ನಾಟಕದಲ್ಲಿ ಬಿಜೆಪಿ 22 ಹಾಗೂ ಜೆಡಿಎಸ್ 2 ಸ್ಥಾನ ಗೆಲ್ಲುವ ಮೂಲಕ ಎನ್‌ಡಿಎಗೆ 24 ಸ್ಥಾನ ಸಿಗಲಿವೆ. ರಾಜ್ಯದ ಆಡಳಿತಾರೂಢ ಕಸ್ಗ್ರೆಸ್ ಕೇವಲ 4ರಲ್ಲಿ ಗೆಲ್ಲಲಿದೆ ಎಂದು ಇಂಡಿಯಾ ಟೀವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. ಪ್ರಸ್ತುತ ಬಿಜೆಪಿ 25, ಜೆಡಿಎಸ್ 1, ಕಾಂಗ್ರೆಸ್ 1 ಹಾಗೂ ಪಕ್ಷೇತರರು 1 ಸ್ಥಾನ ಹೊಂದಿದ್ದಾರೆ.