ಇಂದು ಬಿಜೆಪಿ 100 ಅಭ್ಯರ್ಥಿ ಪಟ್ಟಿ ಪ್ರಕಟ?

| Published : Feb 29 2024, 02:02 AM IST / Updated: Feb 29 2024, 08:23 AM IST

ಸಾರಾಂಶ

ಮೊದಲ ಪಟ್ಟಿಯಲ್ಲೇ ಮೋದಿ, ಶಾ ಹೆಸರು ಇರುವ ಸಾಧ್ಯತೆಯಿದ್ದು, ಪಕ್ಷಕ್ಕೆ ಕಠಿಣವಿರುವ ಬಂಗಾಳ, ತ.ನಾಡು ಪಟ್ಟಿ ಕೂಡ ಘೋಷಣೆಯಾಗಲಿದೆ ಎನ್ನಲಾಗಿದೆ.

ನವದೆಹಲಿ: ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ಬಿಜೆಪಿ ಗುರುವಾರ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. 

ಈ ಪಟ್ಟಿಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಫೆ.29 ರಂದು ಸಭೆ ಸೇರಲಿದೆ. ನಂತರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ. 

ಇದಕ್ಕಾಗಿ ಹಲವು ರಾಜ್ಯಗಳ ಬಿಜೆಪಿ ನಾಯಕರ ಜೊತೆ ವರಿಷ್ಠರು ಬುಧವಾರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದ್ದಾರೆ.ಪ್ರಧಾನಿ ಮೋದಿ ಈಗ ವಾರಾಣಸಿಯಿಂದ ಸಂಸದರಾಗಿದ್ದಾರೆ. 

ಅಲ್ಲಿ ಅವರು 2 ಬಾರಿ ಗೆದ್ದಿದ್ದಾರೆ. ಅವರು 2014ರಲ್ಲಿ 3.37 ಲಕ್ಷ ಮತ ಮತ್ತು 2019ರಲ್ಲಿ 4.8 ಲಕ್ಷದ ಭಾರೀ ಅಂತರದಿಂದ ಗೆದ್ದಿದ್ದರು. ಅಮಿತ್ ಶಾ 2019ರ ಚುನಾವಣೆಯಲ್ಲಿ ಮೊದಲ ಬಾರಿ ಲೋಕಸಭೆಗೆ ಗಾಂಧಿನಗರದಿಂದ ಸ್ಪರ್ಧಿಸಿ ಗೆದ್ದಿದ್ದರು.