ಸಾರಾಂಶ
ದೇಶಾದ್ಯಂತ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ದೇಶಾದ್ಯಂತ ಮೋದಿಯವರ ಗ್ಯಾರಂಟಿ ಪ್ರಚಾರ ರಥಗಳಿಗೆ ಜೆಪಿ ನಡ್ಡಾ ಚಾಲನೆ ನೀಡಿದ್ದಾರೆ. ಅಲ್ಲದೆ ಪ್ರಣಾಳಿಕೆಗೆ ಸಲಹೆ ನೀಡಲು ಸಹಾಯವಾಣಿಯನ್ನೂ ಆರಂಭಿಸಿದ್ದಾರೆ.
ನವದೆಹಲಿ: ಲೋಕಸಭೆ ಚುಣಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಬಿಜೆಪಿ ಪ್ರಚಾರ ರಥಗಳಿಗೆ ಸೋಮವಾರ ಚಾಲನೆ ನೀಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿರುವ ಜನಸ್ನೇಹಿ ಯೋಜನೆಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಪ್ರಚುರಪಡಿಸುವ ‘ವಿಕಸಿತ್ ಭಾರತ್ ಮೋದಿಯ ಗ್ಯಾರಂಟಿ’ ವಿಡಿಯೋ ಪ್ರಚಾರ ರಥಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು.
ರಥಗಳಿಗೆ ಎಲ್‌ಸಿಡಿ ಸ್ಕ್ರೀನ್ ಹಾಕಲಾಗಿದ್ದು, ಮೋದಿ ಸಾಧನೆಗಳನ್ನು ಅದರ ಮೇಲೆ ಬಿತ್ತರಿಸಲಾಗುತ್ತದೆ.
ಈ ವೇಳೆ ಮಾತನಾಡಿದ ಅವರು, ‘ಈ ಪ್ರಚಾರ ರಥಗಳು ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಸಂಚರಿಸಿ ಸರ್ಕಾರದ ಯೋಜನೆ ಪ್ರಚಾರ ಮಾಡುತ್ತವೆ.
ಜೊತೆಗೆ ಬಿಜೆಪಿಯ ಪ್ರಣಾಳಿಕೆ ‘ಸಂಕಲ್ಪ ಪತ್ರ’ಕ್ಕೆ ಸಲಹೆಗಳನ್ನು ಸ್ವೀಕರಿಸಲಿವೆ. 9090902024ಕ್ಕೆ ಮಿಸ್ಡ್ ಕಾಲ್ ನೀಡಿ ಪ್ರಣಾಳಿಕೆಗೆ ಜನರು ಸಲಹೆ ನೀಡಬಹುದು.
ಈ ಮೂಲಕ ಮಾ.15ರೊಳಗೆ 1 ಕೋಟಿಗೂ ಹೆಚ್ಚು ಸಲಹೆಗಳನ್ನು ಸ್ವೀಕರಿಸುವ ಗುರಿ ಹೊಂದಿದ್ದೇವೆ’ ಎಂದು ತಿಳಿಸಿದರು.