ಬಿಜೆಪಿ ಹಿರಿಯ ನಾಯಕ ಲಾಲು ಕೃಷ್ಣ ಅಡ್ವಾಣಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿರ

| Published : Dec 15 2024, 02:02 AM IST / Updated: Dec 15 2024, 04:36 AM IST

ಸಾರಾಂಶ

  ಬಿಜೆಪಿ ಹಿರಿಯ ನಾಯಕ ಲಾಲು ಕೃಷ್ಣ ಅಡ್ವಾಣಿ( 97) ಅವರ ಆರೋಗ್ಯ ಹದಗೆಟ್ಟಿದ್ದು, ಶುಕ್ರವಾರ ರಾತ್ರಿ ದೆಹಲಿಯ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನವದೆಹಲಿ: ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ( 97) ಅವರ ಆರೋಗ್ಯ ಹದಗೆಟ್ಟಿದ್ದು, ಶುಕ್ರವಾರ ರಾತ್ರಿ ದೆಹಲಿಯ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಆಸ್ಪತ್ರೆ, ‘ಸದ್ಯದ ಮಟ್ಟಿಗೆ ಅಡ್ವಾಣಿಯಯವರ ಆರೋಗ್ಯ ಸ್ಥಿರವಾಗಿದೆ. ನರ ಶಾಸ್ತ್ರಜ್ಞ ಡಾ। ವಿನೀತ್‌ ಸೂರಿ ಅವರು ಅಡ್ವಾಣಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಶನಿವಾರ ಮಧ್ಯಾಹ್ನ ಹೇಳಿದ್ದಾರೆ. 

ಆದರೆ ಅಡ್ವಾಣಿ ಅವರಿಗೆ ಕಾಣಿಸಿಕೊಂಡ ಅನಾರೋಗ್ಯ ಏನೆಂಬುದನ್ನು ಅವರು ಹೇಳಿಲ್ಲ.ಕಳೆದ ಕೆಲ ತಿಂಗಳಿನಿಂದ ಅಡ್ವಾಣಿ ಅವರು ಪದೇ ಪದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಜುಲೈ ನಂತರ ಅವರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು 4ನೇ ಬಾರಿ. ಈ ಹಿಂದೆ ಅವರು ಅಪೋಲೋ ಆಸ್ಪತ್ರೆ ಮತ್ತು ದೆಹಲಿಯ ಏಮ್ಸ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.