ಮೋದಿ ‘ಮುಸ್ಲಿಂ ಹೇಳಿಕೆ’ ಖಂಡಿಸಿದ್ದ ಬಿಜೆಪಿ ಮುಸ್ಲಿಂ ನಾಯಕ ವಜಾ

| Published : Apr 25 2024, 01:01 AM IST / Updated: Apr 25 2024, 05:34 AM IST

ಮೋದಿ ‘ಮುಸ್ಲಿಂ ಹೇಳಿಕೆ’ ಖಂಡಿಸಿದ್ದ ಬಿಜೆಪಿ ಮುಸ್ಲಿಂ ನಾಯಕ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮುಸ್ಲಿಮರ ಕುರಿತು ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದಕ್ಕೆ ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷನನ್ನು ಬಿಜೆಪಿ ಉಚ್ಚಾಟಿಸಿದೆ.

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮುಸ್ಲಿಮರ ಕುರಿತು ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದಕ್ಕೆ ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷನನ್ನು ಬಿಜೆಪಿ ಉಚ್ಚಾಟಿಸಿದೆ.

ರಾಜಸ್ಥಾನದ ಬಿಕಾನೇರ್‌ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಸ್ಮಾನ್‌ ಘನಿ ತಮ್ಮ ಹೇಳಿಕೆಗಳಿಂದ ಬಿಜೆಪಿಯ ಘನತೆ ಹಾಗೂ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಈ ಕಾರಣವಾಗಿ ಅವರನ್ನು 6 ವರ್ಷಗಳವರೆಗೆ ವಜಾ ಮಾಡಲಾಗಿದೆ ಎಂದು ಪಕ್ಷ ಹೇಳಿದೆ.

ಘನಿ ಅವರು ಮೋದಿ ಭಾಷಣವನ್ನು ಟೀಕಿಸಿ, ಈ ಬಾರಿ ರಾಜಸ್ಥಾನದ 25 ಕ್ಷೇತ್ರಗಳಲ್ಲಿ ಬಿಜೆಪಿ 2-4 ಸೀಟು ಕಳೆದುಕೊಳ್ಳುತ್ತದೆ ಎಂದು ಹೇಳಿದ್ದರು.