ಸಾರಾಂಶ
ಪ್ಯಾಲೆಸ್ತೀನ್ ಹಾಗೂ ಬಾಂಗ್ಲಾದೇಶವನ್ನು ಬೆಂಬಲಿಸುವ ಬರಹಗಳುಳ್ಳ ಬ್ಯಾಗ್‌ಗಳೊಂದಿಗೆ ಚಳಿಗಾಲದ ಅಧಿವೇಶನಕ್ಕೆ ಹಾಜರಾಗಿ ಸುದ್ದಿಯಾಗುತ್ತಿರುವ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ಬಿಜೆಪಿ ಕಡೆಯಿಂದ ‘1984ರ ಸಿಖ್ ವಿರೋಧಿ ದಂಗೆ’ಯನ್ನು ನೆನಪಿಸುವ ಬ್ಯಾಗ್ ಒಂದನ್ನು ಉಡುಗೊರೆಯಾಗಿ ನೀಡಲಾಗಿದೆ.
ನವದೆಹಲಿ: ಇತ್ತೀಚೆಗೆ ಪ್ಯಾಲೆಸ್ತೀನ್ ಹಾಗೂ ಬಾಂಗ್ಲಾದೇಶವನ್ನು ಬೆಂಬಲಿಸುವ ಬರಹಗಳುಳ್ಳ ಬ್ಯಾಗ್‌ಗಳೊಂದಿಗೆ ಲೋಕಸಭೆಯ ಚಳಿಗಾಲದ ಅಧಿವೇಶನಕ್ಕೆ ಹಾಜರಾಗಿ ಸುದ್ದಿಯಾಗುತ್ತಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ಬಿಜೆಪಿ ಕಡೆಯಿಂದ ‘1984ರ ಸಿಖ್ ವಿರೋಧಿ ದಂಗೆ’ಯನ್ನು ನೆನಪಿಸುವ ಬ್ಯಾಗ್ ಒಂದನ್ನು ಉಡುಗೊರೆಯಾಗಿ ನೀಡಲಾಗಿದೆ.
ಸಂಸತ್ತಿನಲ್ಲಿ ನಡೆದು ಹೋಗುತ್ತಿದ್ದ ವೇಳೆ ಬಿಜೆಪಿ ಭುವನೇಶ್ವರದ ಸಂಸದೆ ಅಪರಾಜಿತಾ ಸಾರಂಗಿ ಅವರು ಪ್ರಿಯಾಂಕಾಗೆ ಈ ಬ್ಯಾಗ್ ನೀಡಿದ್ದು, ‘ತಮ್ಮ ಬ್ಯಾಗ್ ಮೂಲಕ ವಿಭಿನ್ನವಾಗಿ ಸಂದೇಶಗಳನ್ನು ರವಾನಿಸುತ್ತಿರುವ ಪ್ರಿಯಾಂಕಾ ಈ ದಂಗೆಯ ಬಗ್ಗೆಯೂ ಮಾತಾಡಬೇಕಿದೆ’ ಎಂದರು. ಈ ಬ್ಯಾಗ್ ಸ್ವೀಕರಿಸಿದ ಪ್ರಿಯಾಂಕಾ ಏನೂ ಮಾತನಾಡದೇ ನಡೆದು ಹೋದರು.
1984ರಲ್ಲಿ ಸಿಖ್ ಅಂಗರಕ್ಷಕರಿಂದ ಸೋನಿಯಾ ಗಾಂಧಿಯವರ ಹತ್ಯೆಯಾಗಿತ್ತು. ಅದರ ಬೆನ್ನಲ್ಲೇ ಪಂಜಾಬ್‌ನಲ್ಲಿ ಸಿಖ್ಖರ ವಿರುದ್ಧ ದಾಳಿಗಳು ಭುಗಿಲೆದ್ದಿದ್ದು, ಇದರಲ್ಲಿ ಆ ಸಮುದಾಯದ ಸುಮಾರು 2730 ಜನರನ್ನು ಹತ್ಯೆ ಮಾಡಲಾಗಿತ್ತು.
ಅಮಿತ್ ಶಾ ವಿರುದ್ಧ ಪ್ರತಿಭಟನೆ:
ಈ ನಡುವೆ ಕಾಂಗ್ರೆಸ್ ಸಂಸದರು, ‘ಅಂಬೇಡ್ಕರ್ ಅವರಿಗೆ ಅವಮಾನಿಸಿದ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಸಂಸತ್ ಸನಿಹದ ವಿಜಯ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು.