ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ : ಮೊದಲ ಹಂತದ 16 ಬಿಜೆಪಿ ಅಭ್ಯರ್ಥಿಗಳ ಘೋಷಣೆ

| Published : Aug 27 2024, 01:32 AM IST / Updated: Aug 27 2024, 04:53 AM IST

ಸಾರಾಂಶ

ಮುಂಬರುವ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ 16 ಅಭ್ಯರ್ಥಿಗಳ ನವೀಕೃತ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ.

 ನವದೆಹಲಿ/ಜಮ್ಮುಮುಂಬರುವ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ 16 ಅಭ್ಯರ್ಥಿಗಳ ನವೀಕೃತ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ.ಸೋಮವಾರ ಬೆಳಗ್ಗೆ ಎಲ್ಲ 3 ಹಂತದ ಚುನಾವಣೆಗೆ 44 ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿತ್ತು. 

ಆದರೆ ಭಿನ್ನಮತದ ಸೂಚನೆ ದೊರಕುತ್ತಿದ್ದಂತೆಯೇ ತಿದ್ದುಪಡಿಯ ಕಾರಣ ನೀಡಿ, ಮೊದಲು 15 ಅಭ್ಯರ್ಥಿಗಳು ಹಾಗೂ ಕೆಲವೇ ಹೊತ್ತಿನಲ್ಲಿ 1 ಅಭ್ಯರ್ಥಿಯ 2 ಪಟ್ಟಿಗಳನ್ನು ಪಕ್ಷ ಬಿಡುಗಡೆ ಮಾಡಿತು.ಮೊದಲ ಹಂತದ ಅಭ್ಯರ್ಥಿಗಳಿಗೆ ಮಾತ್ರ ಈಗ ಟಿಕೆಟ್‌ ನೀಡಲಾಗಿದೆ. 2-3ನೇ ಹಂತದ ಟಿಕೆಟ್‌ಗಳನ್ನು ಹಿಂಪಡೆಯಲಾಗಿದೆ. ನಂತರ ಘೋಷಿಸಲಾಗುವುದು ಎಂದು ಪಕ್ಷ ಹೇಳಿದೆ. ಇದೇ ವೇಳೆ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಅತೃಪ್ತರ ಆಕ್ರೋಶ, ಪ್ರತಿಭಟನೆ:  ಮೊದಲ ಅಭ್ಯರ್ಥಿ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ಬಿಜೆಪಿಯ ಹಲವು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಬಿಜೆಪಿ ಕಚೇರಿಗಳ ಎದುರು ಪ್ರತಿಭಟನೆಗಳೂ ನಡೆದಿವೆ.