ಮಹಾರಾಷ್ಟ್ರದ ಮುನಿಸಿಪಲ್ ಮತ್ತು ನಗರ ಪಂಚಾಯತ್‌ಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದರೆ, ವಿಪಕ್ಷ ಮಹಾ ಅಘಾಡಿ ಕೂಟಕ್ಕೆ ಹೀನಾಯ ಸೋಲಾಗಿದೆ. ಅದರ ಬೆನ್ನಲ್ಲೇ ಇದು ಅಧಿಕಾರ ಮತ್ತು ಹಣ ದುರ್ಬಳಕೆಗೆ ಸಿಕ್ಕ ಜಯ ಎಂದು ವಿಪಕ್ಷಗಳು ಆರೋಪ ಮಾಡಿವೆ.
ಮುನಿಸಿಪಲ್, ನಗರ ಪಂಚಾಯತ್ ಚುನಾವಣೆ
ನಾಗಪುರ: ಮಹಾರಾಷ್ಟ್ರದ ಮುನಿಸಿಪಲ್ ಮತ್ತು ನಗರ ಪಂಚಾಯತ್‌ಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದರೆ, ವಿಪಕ್ಷ ಮಹಾ ಅಘಾಡಿ ಕೂಟಕ್ಕೆ ಹೀನಾಯ ಸೋಲಾಗಿದೆ. ಅದರ ಬೆನ್ನಲ್ಲೇ ಇದು ಅಧಿಕಾರ ಮತ್ತು ಹಣ ದುರ್ಬಳಕೆಗೆ ಸಿಕ್ಕ ಜಯ ಎಂದು ವಿಪಕ್ಷಗಳು ಆರೋಪ ಮಾಡಿವೆ.ಭರ್ಜರಿ ಜಯ: 286 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 215 ಕಡೆ ಬಿಜೆಪಿ, ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿ ಜಯ ಸಾಧಿಸಿದೆ. ಈ ಪೈಕಿ ಬಿಜೆಪಿ 129, ಶಿವಸೇನೆ 51 ಮತ್ತು ಎನ್‌ಸಿಪಿ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಮತ್ತೊಂದೆಡೆ ಮಹಾ ಅಘಾಡಿ ಕೂಟ 51 ಕಡೆ ಗೆದ್ದಿದೆ. ಈ ಪೈಕಿ ಕಾಂಗ್ರೆಸ್ ಪಾಲು 35, ಉದ್ಧವ್ ಬಣದ ಶಿವಸೇನೆ 9, ಶರದ್ ಪವಾರ್ ಬಣದ ಎನ್‌ಸಿಪಿ ಗೆದ್ದ 7 ಸ್ಥಾನ ಸೇರಿವೆ.
ಪಕ್ಷದ ಗೆಲುವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಪಕ್ಷದ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.