ಏಕ ಚುನಾವಣೆ ಮಸೂದೆ ವೇಳೆ 20 ಬಿಜೆಪಿ ಸಂಸದರು ಚಕ್ಕರ್‌

| Published : Dec 18 2024, 12:46 AM IST

ಏಕ ಚುನಾವಣೆ ಮಸೂದೆ ವೇಳೆ 20 ಬಿಜೆಪಿ ಸಂಸದರು ಚಕ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆ ವೇಳೆ ಲೋಕಸಭೆಯಲ್ಲಿ 20 ಬಿಜೆಪಿ ಸಂಸದರು ಗೈರು ಹಾಜರಾಗಿದ್ದಾರೆ. ಹೀಗಾಗಿ ಇವರಿಗೆ ಸಂಸದರಿಗೆ ಪಕ್ಷ ನೋಟಿಸ್‌ ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆ ವೇಳೆ ಲೋಕಸಭೆಯಲ್ಲಿ 20 ಬಿಜೆಪಿ ಸಂಸದರು ಗೈರು ಹಾಜರಾಗಿದ್ದಾರೆ. ಹೀಗಾಗಿ ಇವರಿಗೆ ಸಂಸದರಿಗೆ ಪಕ್ಷ ನೋಟಿಸ್‌ ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಈ ಮಸೂದೆ ಮಂಡನೆ ವೇಳೆ ಎಲ್ಲ ಬಿಜೆಪಿ ಸದಸ್ಯರೂ ಕಡ್ಡಾಯವಾಗಿ ಹಾಜರಿರಬೇಕು ಎಂದು ವಿಪ್‌ ನೀಡಲಾಗಿತ್ತು. ಆದರೆ ವಿಪ್‌ ಉಲ್ಲಂಭಿಸಿದ ಇವರು ಗೈರಾಗಿದ್ದಾರೆ. ಇದರಿಂದ ಎನ್‌ಡಿಎ ಬಲ 293 ಇದ್ದರೂ ಮಸೂದೆ ಮಂಡನೆ ಪರ 269 ಮತ ಮಾತ್ರ ಚಲಾವಣೆ ಆಗಿವೆ. ಹೀಗಾಗಿ ಇವರಿಗೆ ನೋಟಿಸ್ ಕಳಿಸಲು ಪಕ್ಷ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

ಇವರ ಗೈರಿಂದ ಮಸೂದೆಗೆ ಯಾವುದೇ ರೀತಿಯ ತೊಡಕಾಗದಿದ್ದರೂ, ಸರ್ಕಾರಕ್ಕೆ ಸಾಂವಿಧಾನಿಕ ತಿದ್ದುಪಡಿ ತರಲು 3ನೇ 2ರಷ್ಟು ಬೆಂಬಲವಿಲ್ಲ ಎಂದು ಟೀಕಿಸಲು ವಿಪಕ್ಷ ಕಾಂಗ್ರೆಸ್‌ಗೆ ಅನುವು ಮಾಡಿಕೊಟ್ಟಂತಾಗಿದೆ.