ಕೊರೆವ ಚಳಿ ಕಾರಣ ಪ್ರಾಣಪ್ರತಿಷ್ಠಾಪನೆಗೆ ಅಡ್ವಾಣಿ ಗೈರು

| Published : Jan 23 2024, 01:48 AM IST / Updated: Jan 23 2024, 11:40 AM IST

ಸಾರಾಂಶ

ಅಯೋಧ್ಯೆಯಲ್ಲಿ ಅತ್ಯಂತ ಕೊರೆಯುವ ಚಳಿಯಿರುವ ಕಾರಣ ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಅವರು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದಿಂದ ದೂರವುಳಿದರು.

ಅಯೋಧ್ಯೆ: ರಾಮಮಂದಿರ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಬಿಜೆಪಿ ಹಿರಿಯ ನಾಯಕ ಹಾಗೂ ರಾಮಮಂದಿರ ಹೋರಾಟ ಮೂಲಕ ಬಿಜೆಪಿಗೆ ಚೈತನ್ಯ ನೀಡಿದ್ದ ಎಲ್‌.ಕೆ. ಅಡ್ವಾಣಿ ಅವರು ಗೈರು ಹಾಜರಾದರು.

96ರ ಹರೆಯದ ಅಡ್ವಾಣಿ ಅವರು ತೀವ್ರ ಚಳಿಯ ಕಾರಣ ಇಂದು ''''ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಮೂಲಗಳು ಹೇಳಿವೆ. ಅಡ್ವಾಣಿ ಅವರನ್ನು ಆಹ್ವಾನಿಸುವಾಗ ರಾಮಜನ್ಮಭೂಮಿ ಟ್ರಸ್ಟ್‌ನ ಚಂಪತ್‌ ರಾಯ್ ಅವರು, ‘ಆರೋಗ್ಯ ಹಾಗೂ ವಯಸ್ಸಿನ ದೃಷ್ಟಿಯಿಂದ ನೀವು ಸಮಾರಂಭಕ್ಕೆ ಬರುವುದು ಒಳ್ಳೆಯದಲ್ಲ’ ಎಂದಿದ್ದರು.

ಇದು ವಿವಾದಕ್ಕೀಡಾಗಿತ್ತು. ಬಳಿಕ ವಿಎಚ್‌ಪಿ ನಾಯಕರು ಹೋಗಿ ಅಡ್ವಾಣಿಗೆ ಪ್ರತ್ಯೇಕ ಆಹ್ವಾನ ನೀಡಿದ್ದರು.

ಆಗ ಅಡ್ವಾಣಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದಿದ್ದರು.