ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಬಿಜೆಪಿ ವ್ಯವಸ್ಥೆ

| Published : Jan 03 2024, 01:45 AM IST

ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಬಿಜೆಪಿ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಜ.25ರಿಂದ 60 ದಿನಗಳ ಕಾಲ ಮಹಾ ಸಂಪರ್ಕ ಅಭಿಯಾನ ನಡೆಸಲು ಬಿಜೆಪಿ ಉದ್ದೇಶಿಸಿದ್ದು, ಅದರ ಭಾಗವಾಗಿ ಅಯೋಧ್ಯೆಗೆ ಪ್ರತಿದಿನ 35 ರೈಲುಗಳ ಸಂಚಾರ ನಡೆಸುವಂತೆ ಮನವಿ ಮಾಡಲಾಗುವುದು. ಅಲ್ಲದೆ ಪ್ರತಿದಿನ 50 ಸಾವಿರ ಜನರಿಗೆ ದರ್ಶನ ಮಾಡಿಸಲು ಪಣತೊಡಬೇಕು. ಪ್ರಯಾಣ ವೆಚ್ಚ ಭಕ್ತರದ್ದು, ಅನುಕೂಲ ಕಲ್ಪಿಸುವ ಹೊಣೆ ಬಿಜೆಪಿಗರದ್ದು ಎಂಬ ಸಹಕಾರ ತತ್ವದ ಮೂಲಕ ಹೆಚ್ಚು ಜನರಿಗೆ ರಾಮನ ದರ್ಶನ ಮಾಡಿಸಲು ಬಿಜೆಪಿ ನಿರ್ಣಯ ತೆಗೆದುಕೊಂಡಿದೆ.

ನವದೆಹಲಿ: ಅಯೋಧ್ಯೆಗೆ ಭೇಟಿ ನೀಡಲು ಇಚ್ಛಿಸುವ ರಾಮಭಕ್ತರಿಗೆ ಜ.25ರಿಂದ 2 ತಿಂಗಳವರೆಗೆ ರೈಲು ಪ್ರಯಾಣದ ಅನುಕೂಲ ಕಲ್ಪಿಸಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ದಿಲ್ಲಿಯಲ್ಲಿ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ‘ಜ.25ರಿಂದ ಅಯೋಧ್ಯೆಗೆ ಮಹಾ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿದಿನ 50 ಸಾವಿರ ಮಂದಿಯಂತೆ 60 ದಿನಗಳ ಕಾಲ ರಾಷ್ಟ್ರಾದ್ಯಂತ ಜನರನ್ನು ಅಯೋಧ್ಯೆಗೆ ಕರೆತರಲು ನಾವೆಲ್ಲ ಪಣ ತೊಡಬೇಕಿದೆ. ಅದಕ್ಕಾಗಿ ಅಯೋಧ್ಯೆಯಿಂದ ದೇಶದೆಲ್ಲೆಡೆಗೆ ದಿನಕ್ಕೆ ಕನಿಷ್ಠ 35 ರೈಲುಗಳು ಸಂಚರಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಲಾಗುವುದು’ ಎಂದರು.

ಆದರೆ ಅಯೋಧ್ಯೆಗೆ ಪ್ರಯಾಣ ವೆಚ್ಚವನ್ನು ಭಕ್ತಾದಿಗಳೇ ಭರಿಸಬೇಕು. ಭಕ್ತರಿರುಗೆ ಪ್ರಯಾಣಕ್ಕೆ ಬೇಕಾದ ಅಗತ್ಯ ಸಹಾಯವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು. ಈ ಮೂಲಕ ಹೆಚ್ಚಿನ ಜನರಿಗೆ ರಾಮನ ದರ್ಶನ ಮಾಡಿಸಲು ಪಣ ತೊಡಬೇಕು ಎಂದು ಪಕ್ಷದಿಂದ ಸೂಚಿಸಲಾಗಿದೆ ಎಂದು ಮೂಳಗಳು ಹೇಳಿವೆ.ರಾಮಮಂದಿರ ಉದ್ಘಾಟನೆಗೆ ರಜನೀಕಾಂತ್‌ಗೆ ಆಹ್ವಾನ

ಚೆನ್ನೈ: ಅಯೋಧ್ಯೆ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ಪ್ರಾಣಪ್ರತಿಷ್ಠಾಪನೆಗೆ ಆಗಮಿಸುವಂತೆ ಖ್ಯಾತ ತಮಿಳು ನಟ ರಜನಿಕಾಂತ್‌ಗೆ ಆಹ್ವಾನ ನೀಡಲಾಗಿದೆ.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತದ ಸಂಚಾಲಕ ಮುಂತಾದವರು ನಗರದಲ್ಲಿರುವ ರಜನಿಕಾಂತ್‌ ಅವರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನ ಪತ್ರಿಕೆ ನೀಡುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ರಜನಿಕಾಂತ್‌ ಅವರೂ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ ಪ್ರಾಣಪ್ರತಿಷ್ಠಾಪನೆಗೆ ಆಗಮಿಸಲು ಸಹಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ರಾಮಮಂದಿರ ಉದ್ಘಾಟನೆಗೆ ಅಮಿತಾಭ್‌ ಬಚ್ಚನ್‌, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ವಿವಿಧ ಕ್ಷೇತ್ರದ 7000 ಅಪ್ರತಿಮ ಸಾಧಕರನ್ನು ಆಹ್ವಾನಿಸಲಾಗುತ್ತಿದೆ.