ಬ್ಲಿಂಕಿಟ್‌ನಿಂದ ತರಕಾರಿ, ದಿನಸಿ ರೀತಿ 10 ನಿಮಿಷಕ್ಕೆ ಆ್ಯಂಬುಲೆನ್ಸ್‌ ಸೇವೆ ಶುರು

| Published : Jan 03 2025, 12:34 AM IST / Updated: Jan 03 2025, 04:43 AM IST

ಸಾರಾಂಶ

 ಪ್ರತಿಷ್ಠಿತ ಆನ್‌ಲೈನ್ ಫುಡ್‌ ಡೆಲಿವರಿ ಸಂಸ್ಥೆ ಬ್ಲಿಂಕಿಟ್‌ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಲು ಮುಂದಾಗಿದೆ. ಗುರುಗ್ರಾಮ್‌ನ ಆಯ್ದ ಪ್ರದೇಶಗಳಲ್ಲಿ 10 ನಿಮಿಷದಲ್ಲಿ ಆ್ಯಂಬುಲೆನ್ಸ್‌ ಸೇವೆ ನೀಡುವ ಯೋಜನೆ ಆರಂಭಿಸಿದೆ.

ನವದೆಹಲಿ: ಪ್ರತಿಷ್ಠಿತ ಆನ್‌ಲೈನ್ ಫುಡ್‌ ಡೆಲಿವರಿ ಸಂಸ್ಥೆ ಬ್ಲಿಂಕಿಟ್‌ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಲು ಮುಂದಾಗಿದೆ. ಗುರುಗ್ರಾಮ್‌ನ ಆಯ್ದ ಪ್ರದೇಶಗಳಲ್ಲಿ 10 ನಿಮಿಷದಲ್ಲಿ ಆ್ಯಂಬುಲೆನ್ಸ್‌ ಸೇವೆ ನೀಡುವ ಯೋಜನೆ ಆರಂಭಿಸಿದೆ.

ಬ್ಲಿಂಕಿಟ್ ಬಳಕೆದಾರರು ಆ್ಯಪ್‌ನಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಬಹುದು. ‘ಈ ಆ್ಯಂಬುಲೆನ್ಸ್‌ಗಳು ಆಮ್ಲಜನಕ ಸಿಲಿಂಡರ್‌, ಎಇಡಿ, ಸ್ಟ್ರೆಚರ್‌, ಮಾನಿಟರ್, ಸಾಕ್ಷನ್ ಮಷಿನ್ ಸೇರಿದಂತೆ ಜೀವ ಉಳಿಸುವ ಅಗತ್ಯ ಪರಿಕರಗಳು ಹಾಗೂ ತುರ್ತು ಔಷಧಿ, ಎಂಜೆಕ್ಷನ್‌ಗಳನ್ನು ಒಳಗೊಂಡಿರುತ್ತವೆ. ಅಲ್ಲದೇ ಅಗತ್ಯ ಇರುವವರನ್ನು ಸಾಗಿಸಲು ಸ್ಕೂಪ್ ಸ್ಟ್ರೆಚ್ಚರ್‌ ಮತ್ತು ಗಾಲಿ ಕುರ್ಚಿ ಸೌಲಭ್ಯ ಕೂಡ ಇದೆ. ಪ್ರತಿ ಅಂಬ್ಯುಲೆನ್ಸ್‌ನಲ್ಲಿಯೂ ಒಬ್ಬ ವೈದ್ಯ, ಸಹಾಯಕ ಹಾಗೂ ತರಬೇತಿ ಪಡೆದ ಚಾಲಕ ಇರಲಿದ್ದಾರೆ ’ ಎಂದು ಬ್ಲಿಂಕಿಟ್‌ ಹೇಳಿದೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಟ್ವೀಟ್‌ ಮಾಡಿರುವ ಬ್ಲಿಂಕಿಟ್‌ ಸಿಇಒ ಅಲ್ಬಿಂದರ್ ದಿಂಡ್ಸಾ ‘ತ್ವರಿತವಾಗಿ ಮತ್ತು ಸಮರ್ಪಕ ಅಂಬ್ಯುಲೆನ್ಸ್‌ ಸೇವೆ ಒದಗಿಸಿ, ಸಮಸ್ಯೆ ಬಗ್ಗೆ ಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಇಟ್ಟಿದ್ದೇವೆ. ಮೊದಲ 5 ವಾಹನಗಳು ಗುರುಗ್ರಾಮದಲ್ಲಿ ಸಂಚಾರ ಆರಂಭಿಸಲಿದೆ. ಮುಂದಿನ ಎರಡು ವರ್ಷಗಳಲ್ಲಿ ಉಳಿದ ಸ್ಥಳಗಳಲ್ಲಿ ವಿಸ್ತರಣೆ ಮಾಡುತ್ತೇವೆ. ಇಲ್ಲಿ ಲಾಭ ನಮ್ಮ ಮುಖ್ಯ ಗುರಿ ಅಲ್ಲ. ಗ್ರಾಹಕರ ಕೈಗೆಟಕುವ ದರದಲ್ಲಿ ಸೇವೆ ಒದಗಿಸುತ್ತೇವೆ’ ಎಂದಿದ್ದಾರೆ.