ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ 15 ಜನರ ಹತ್ಯೆ ನಡೆಸಿದ ಭಯೋತ್ಪಾದಕ ಅಪ್ಪ-ಮಗ, ಹನುಕ್ಕಾ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಯಹೂದಿಗಳ ಮೇಲೆ ಗುಂಡಿನ ದಾಳಿಗೂ ಮೊದಲು ಬಾಂಬ್‌ ಎಸೆದಿದ್ದರು ಎಂಬ ವಿಷಯ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಆದರೆ ಆ ಬಾಂಬ್‌ ಸ್ಫೋಟಿಸದೆ ತಪ್ಪಿದ ಅನಾಹುತ

ಸಿಡ್ನಿ: ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ 15 ಜನರ ಹತ್ಯೆ ನಡೆಸಿದ ಭಯೋತ್ಪಾದಕ ಅಪ್ಪ-ಮಗ, ಹನುಕ್ಕಾ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಯಹೂದಿಗಳ ಮೇಲೆ ಗುಂಡಿನ ದಾಳಿಗೂ ಮೊದಲು ಬಾಂಬ್‌ ಎಸೆದಿದ್ದರು ಎಂಬ ವಿಷಯ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಡಿ.14ರಂದು ಗುಂಡಿನ ದಾಳಿಗೂ ಮುನ್ನ ಈ ಇಬ್ಬರು, ಮನೆಯಲ್ಲೇ ತಯಾರಿಸಿದ ಪೈಪ್‌, ಟೆನ್ನಿಸ್‌ ಬಾಲ್‌ ಬಾಂಬ್‌ಗಳನ್ನು ಬೀಚ್‌ನಲ್ಲಿ ಸೇರಿದ್ದ ಜನರತ್ತ ಎಸೆದಿದ್ದರು. ಆದರೆ, ಅವು ಸ್ಫೋಟಗೊಳ್ಳದೆ ಹೋದಾಗ ಗುಂಡಿನ ದಾಳಿ ನಡೆಸಿ 15 ಮಂದಿ ಹತ್ಯೆಗೈದರು. ಒಂದು ವೇಳೆ ಉಗ್ರರಾದ ಸಾಜಿದ್‌ ಅಕ್ರಂ (50) ಮತ್ತು ಪುತ್ರ ನವೀದ್‌ ಅಕ್ರಂ (24) ಎಸೆದಿದ್ದ ಬಾಂಬ್‌ ಸ್ಫೋಟಗೊಂಡಿದ್ದರೆ, ಭಾರೀ ಸಾವು-ನೋವು ಆಗುವ ಅಪಾಯ ಇತ್ತು ಎನ್ನಲಾಗಿದೆ.

ಭಾರೀ ಸಿದ್ಧತೆ:

ಈ ಭಯೋತ್ಪಾದಕ ಅಪ್ಪ-ಮಗ ದಾಳಿಗೆ ಹಲವು ತಿಂಗಳ ಹಿಂದಿನಿಂದಲೇ ಸಿದ್ಥತೆ ಆರಂಭಿಸಿದ್ದರು. ದಾಳಿಗೂ ಎರಡು ದಿನ ಮೊದಲು ಬೋಂಡಿ ಬೀಚ್‌ ಸನಿಹ ತೆರಳಿ ಪರಿಶೀಲಿಸಿ ಬಂದಿದ್ದರು. ಅಲ್ಲದೆ, ನ್ಯೂ ಸೌಥ್‌ ವೇಲ್ಸ್‌ನ ಗ್ರಾಮೀಣ ಭಾಗದಲ್ಲಿ ಗುಂಡು ಹಾರಿಸುವ ಟ್ರೈನಿಂಗ್‌ ನಡೆಸುತ್ತಿದ್ದರು .