ಸಾರಾಂಶ
ವಾಷಿಂಗ್ಟನ್: 6 ಮಹಿಳೆಯರನ್ನು ಒಳಗೊಂಡ ತಂಡವೊಂದು ಸೋಮವಾರ ಹೊಸ ಇತಿಹಾಸ ರಚಿಸಿದೆ. ಖ್ಯಾತ ಪಾಪ್ ಗಾಯಕಿ ಕ್ಯಾಟಿ ಪೆರ್ರಿ ಒಳಗೊಂಡ 6 ಮಹಿಳೆಯರು ಜೆಫ್ ಬೆಜೋಸ್ ಒಡೆತನದ ಬ್ಲ್ಯೂ ಒರಿಜಿನ್ ನೌಕೆಯಲ್ಲಿ ಬಾಹ್ಯಾಕಾಶ ಯಾನವನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ.
ಮಹಿಳೆಯರೇ ಇದ್ದ ತಂಡವೊಂದು ಹೀಗೆ ಯಾನ ಮಾಡಿದ್ದು ಇತಿಹಾಸದಲ್ಲಿ ಇದೇ ಮೊದಲು. ಭಾರತೀಯ ಕಾಲಮಾನ ಸೋಮವಾರ ಸಂಜೆ ಬ್ಲ್ಯೂ ಒರಿಜಿನ್‌ನ ನ್ಯೂ ಶೆಪರ್ಡ್ ಗಗನನೌಕೆ ಪಶ್ಚಿಮ ಟೆಕ್ಸಾಸ್‌ನ ಉಡ್ಡಯನ ಕೇಂದ್ರದಿಂದ 107 ಕಿ.ಮೀ ಮೇಲಿನ ಪ್ರವೇಶಕ್ಕೆ ಯಾನ ಕೈಗೊಂಡು ಅಲ್ಲಿ 10 ನಿಮಿಷ ಕಳೆದು ಬಳಿಕ ಯಶಸ್ವಿಯಾಗಿ ಭೂಮಿಗೆ ಬಂದು ಇಳಿದಿದೆ.
ಈ ಗಗನಯಾನದಲ್ಲಿ ಪಾಪ್ ಗಾಯಕಿ ಕೇಟಿ ಪೆರಿ, ಜೆಪ್ ಬೆಜೋಸ್ ಪ್ರೇಯಸಿ ಲಾರೆನ್ ಸ್ಯಾಂಚೆಜ್ , ಹೋರಾಟಗಾರ್ತಿ ಅಮಂಡಾ ನ್ಗುಯೆನ್, ಪತ್ರಕರ್ತೆ ಗೇಲ್ ಕಿಂಗ್ , ನಾಸಾದ ಮಾಜಿ ವಿಜ್ಞಾನಿ ಐಶಾ ಬೋವ್ ಮತ್ತು ಸಿನಿಮಾ ನಿರ್ಮಾಪಕಿ ಕೆರಿಯಾನ್ನೆ ಪ್ಲಿನ್ ತಂಡದಲ್ಲಿದ್ದರು.
1963ರಲ್ಲಿ ಸೋವಿಯತ್ ರಷ್ಯಾದ ಮಹಿಳಾ ಗಗನಯಾತ್ರಿ ವ್ಯಾಲೆಂಟಿನಾ ತೆರಷ್ಕೋವಾ ಏಕಾಂಗಿಯಾಗಿ ಗಗನಯಾನ ಮಾಡಿದ್ದರು.