ಸಾರಾಂಶ
ಕಳೆದ 3 ವರ್ಷಗಳಿಂದ ರಷ್ಯಾ ಜೊತೆಗೆ ಯುದ್ಧದಲ್ಲಿ ತೊಡಗಿರುವ ಉಕ್ರೇನ್ ತನ್ನ ಸೇನೆಯ ಖರ್ಚುಗಳನ್ನು ಪೂರೈಸಲು ನೀಲಿ ಚಿತ್ರವನ್ನು ಕಾನೂನು ಬದ್ಧಗೊಳಿಸಲು ಮುಂದಾಗಿದೆ ಎನ್ನಲಾಗಿದೆ.
ಕೀವ್: ಕಳೆದ 3 ವರ್ಷಗಳಿಂದ ರಷ್ಯಾ ಜೊತೆಗೆ ಯುದ್ಧದಲ್ಲಿ ತೊಡಗಿರುವ ಉಕ್ರೇನ್ ತನ್ನ ಸೇನೆಯ ಖರ್ಚುಗಳನ್ನು ಪೂರೈಸಲು ನೀಲಿ ಚಿತ್ರವನ್ನು ಕಾನೂನು ಬದ್ಧಗೊಳಿಸಲು ಮುಂದಾಗಿದೆ ಎನ್ನಲಾಗಿದೆ.
ನೀಲಿ ಚಿತ್ರ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದೆ. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಒಂದು ವೇಳೆ ಇದಕ್ಕೆ ಮಾನ್ಯತೆ ಸಿಕ್ಕಲ್ಲಿ ಇದರಿಂದ ಬರುವ ಆದಾಯವನ್ನು ಸೇನೆಗೆ ವ್ಯಯಿಸಲು ಜೆಲೆನ್‌ಸ್ಕಿ ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಆದರೆ ದೇಶದಲ್ಲಿ ಈ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾನೂನು ಮಾನ್ಯತೆ ಸಿಕ್ಕಲ್ಲಿ ಉಕ್ರೇನ್‌ಗೆ ವಾರ್ಷಿಕ ನೂರಾರು ಕೋಟಿ ರು. ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ.