ಸಾರಾಂಶ
ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಇದೇ ವರ್ಷ ನವೆಂಬರ್‌ಗೆ ನಿಗದಿಯಾಗಿರುವ ಪರಿಸರ ಸಮ್ಮೇಳನ (ಕಾಪ್)ಕ್ಕಾಗಿ ರಸ್ತೆ ನಿರ್ಮಿಸಲು ಅಲ್ಲಿನ ಸರ್ಕಾರವು ಅಮೆಜಾನ್ ಮಳೆಕಾಡಿನಲ್ಲಿ 13 ಕಿ.ಮೀ.ಗಳಷ್ಟು ದಟ್ಟಾರಣ್ಯವನ್ನು ನಾಶ ಮಾಡಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಬ್ರೆಜಿಲ್‌ನ ಈಶಾನ್ಯ ಭಾಗದಲ್ಲಿನ ಬೆಲೆಂ ನಗರದಲ್ಲಿ ಸಮ್ಮೇಳನಕ್ಕಾಗಿ ವಿದೇಶಿ ಗಣ್ಯರು ಸೇರಿ 50,000 ಅತಿಥಿಗಳು ಸೇರಲಿದ್ದಾರೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಚತುಷ್ಪತ ಹೆದ್ದಾರಿ ನಿರ್ಮಿಸಲು ಬ್ರೆಜಿಲ್ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಆಯ್ಕೆ ಮಾಡಿಕೊಂಡ ಮಾರ್ಗವೇ ಅರಣ್ಯ. ಈ ಕಾಡು ಅತಿ ಸೂಕ್ಷ್ಮ ಜೀವಿಗಳಿಗೆ ಮನೆಯಾಗಿದ್ದು, ಕಾಡು ನಾಶದಿಂದ ಇವುಗಳು ಅಳಿದುಹೋಗುತ್ತವೆ. ಜೊತೆಗೆ ಅಮೆಜಾನ್ ಅತಿ ಹೆಚ್ಚು ಕಾರ್ಬನ್ ಗುಣವನ್ನು ಸೆಳೆದುಕೊಳ್ಳುತ್ತಿದ್ದು, ಇದರಿಂದಾಗಿ ಕಾರ್ಬನ್ ಪ್ರಮಾಣ ಹೆಚ್ಚಲಿದೆ ಎಂದು ಪರಿಸರವಾದಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ ಈ ವಿಧಾನವನ್ನು ‘ಸುಸ್ಥಿರ’ ಹೇಳಿದೆ.