ಉದ್ಘಾಟನೆಗೂ ಮುನ್ನವೇ ಕುಸಿದ 12 ಕೋಟಿ ರು. ಸೇತುವೆ!

| Published : Jun 19 2024, 01:04 AM IST

ಸಾರಾಂಶ

ಬಿಹಾರದ ಅರರಿಯಾದಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ ರು ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದ ಸೇತುವೆ ಲೋಕಾರ್ಪಣೆಗೂ ಮುನ್ನವೇ ಕುಸಿದಿರುವ ಘಟನೆ ಮಂಗಳವಾರ ನಡೆದಿದೆ.

ಪಟನಾ: ಬಿಹಾರದ ಅರರಿಯಾದಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ ರು ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದ ಸೇತುವೆ ಲೋಕಾರ್ಪಣೆಗೂ ಮುನ್ನವೇ ಕುಸಿದಿರುವ ಘಟನೆ ಮಂಗಳವಾರ ನಡೆದಿದೆ.

ಒಂದು ಬದಿಗೆ ವಾಲಿಕೊಂಡಿದ್ದ ಬ್ರಿಡ್ಜ್‌ ನದಿ ರಭಸಕ್ಕೆ ಕುಸಿದು ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಕುರ್ಸಕಾಂತ್ ಹಾಗೂ ಸಿಕ್ತಿ ಗ್ರಾಮಗಳ ನಡುವೆ ಈ ಸೇತುವೆ ನಿರ್ಮಿಸಲಾಗಿತ್ತು.ಇದು ಈ ವರ್ಷದಲ್ಲಿ ಬಿಹಾರದಲ್ಲಿ ನಡೆದ ಎರಡನೇ ಸೇತುವೆ ದುರಂತ. ಕಳೆದ ಮಾರ್ಚ್‌ನಲ್ಲಿ ಸೌಪಾಲ್ ಎಂಬಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಓರ್ವ ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದರು.

ಘಟನಾ ಸ್ಥಳಕ್ಕೆ ಸಿಕ್ತಿ ಶಾಸಕ ವಿಜಯ್ ಕುಮಾರ್ ಭೇಟಿ ನೀಡಿದ್ದಾರೆ.