ಸಾರಾಂಶ
ಹಿರಿಯರ ಆಸ್ತಿಗಾಗಿ ಮಕ್ಕಳು ಕಿತ್ತಾಡುವುದು ಸಾಮಾನ್ಯ. ಆದರೆ ಮೃತ ತಂದೆಯ ಅಂತ್ಯಸಂಸ್ಕಾರಕ್ಕಾಗಿ ಜಗಳವಾಡಿದ ಮಕ್ಕಳಿಬ್ಬರು ಕೊನೆಗೆ ಶವವನ್ನು ಸರಿಯಾಗಿ ಎರಡು ತುಂಡು ಮಾಡಿ ಪ್ರತ್ಯೇಕವಾಗಿ ಅಂತ್ಯಸಂಸ್ಕಾರಕ್ಕೆ ಮುಂದಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ತಿಕಂಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಭೋಪಾಲ್: ಹಿರಿಯರ ಆಸ್ತಿಗಾಗಿ ಮಕ್ಕಳು ಕಿತ್ತಾಡುವುದು ಸಾಮಾನ್ಯ. ಆದರೆ ಮೃತ ತಂದೆಯ ಅಂತ್ಯಸಂಸ್ಕಾರಕ್ಕಾಗಿ ಜಗಳವಾಡಿದ ಮಕ್ಕಳಿಬ್ಬರು ಕೊನೆಗೆ ಶವವನ್ನು ಸರಿಯಾಗಿ ಎರಡು ತುಂಡು ಮಾಡಿ ಪ್ರತ್ಯೇಕವಾಗಿ ಅಂತ್ಯಸಂಸ್ಕಾರಕ್ಕೆ ಮುಂದಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ತಿಕಂಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಧ್ಯಾನಿ ಸಿಂಗ್ ಘೋಷ್ (85) ಭಾನುವಾರ ಮೃತರಾಗಿದ್ದರು. ಅವರ ಆರೈಕೆ ಮಾಡುತ್ತಿದ್ದ ಮಗ ದಾಮೋದರ್ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಕಿಶನ್ ಸಿಂಗ್ ಎಂದ ಇನ್ನೊಬ್ಬ ಮಗ ಬಂದು ತಾನು ಅಂತ್ಯಸಂಸ್ಕಾರ ನಡೆಸುವುದಾಗಿ ಹೇಳಿದ್ದಾನೆ.ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ತಂದೆಯ ಮೃತದೇಹ ಸುಮಾರು 5 ಗಂಟೆಗಳ ಕಾಲ ಮನೆಯ ಹೊರಗೇ ಇತ್ತು. ಆಗ ಶವವನ್ನು 2 ಭಾಗವಾಗಿಸಿ ಪ್ರತ್ಯೇಕವಾಗಿ ಅಂತ್ಯಸಂಸ್ಕಾರ ಮಾಡುವಂತೆ ಕಿಶನ್ ಸೂಚಿಸಿದ್ದಾನೆ. ಬಂಧು ಬಳಗದವರು ಎಷ್ಟು ಹೇಳಿದರೂ ಕೇಳದೆ ಕಿಶನ್ ಹಠ ಹಿಡಿದಾಗ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರ ನಿಗಾದಲ್ಲಿ ದಾಮೋದರ್ ಅಂತ್ಯಸಂಸ್ಕಾರ ನೆರವೇರಿಸಿದ್ದು, ಕಿಶನ್‌ರ ಪರಿವಾರ ಕೂಡ ಭಾಗಿಯಾಗಿತ್ತು.