ಸಾರಾಂಶ
ತೆಲಂಗಾಣದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಸಂಸದ ಚೆವೆಲ್ಲಾ ರಂಜಿತ್ ರೆಡ್ಡಿ ಮತ್ತು ಶಾಸಕ ನಾಗೇಂದರ್ ಬಿಆರ್‌ಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಹೈದರಾಬಾದ್: ಬಿಆರ್‌ಎಸ್ ಪಕ್ಷದ ಹಾಲಿ ಸಂಸದ ಚೆವೆಲ್ಲಾ ರಂಜಿತ್ ರೆಡ್ಡಿ ಹಾಗೂ ಖೈರತಾಬಾದ್‌ನ ಶಾಸಕ ಡಿ. ನಾಗೇಂದರ್ ಲೋಕಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಚೆವೆಲ್ಲಾ ರಂಜಿತ್ ರೆಡ್ಡಿ ಹಾಗೂ ಡಾ. ನಾಗೇಂದರ್ ಅವರು ಭಾನುವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರು.ವಾರಂಗಲ್‌ನ ಸಂಸದ ಪಸುನೂರಿ ದಯಾಕರ್ ಶನಿವಾರವಷ್ಟೇ ಕಾಂಗ್ರೆಸ್ ಸೇರಿದ್ದಾರೆ.
ಈ ಹಿಂದೆ ಜಹೀರಾಬಾದ್ ಮತ್ತು ನಾಗರ್‌ಕರ್ನೂಲ್‌ನ ಬಿಆರ್‌ಎಸ್ ಸಂಸದರಾದ ಬಿ.ಬಿ. ಪಾಟೀಲ್ ಮತ್ತು ಪಿ. ರಾಮುಲು ಬಿಜೆಪಿಗೆ ಸೇರಿಕೊಂಡಿದ್ದರು.