ಸಾರಾಂಶ
ಪಹಲ್ಗಾಂ ನರಮೇಧ, ಆಪರೇಷನ್ ಸಿಂದೂರದ ಬಳಿಕ ದೇಶದ ಗಡಿಗಳಲ್ಲಿ ಅಪಾಯ ಹೆಚ್ಚುತ್ತಿರುವ ನಡುವೆಯೇ, ಭಾರತೀಯ ಸೇನೆ ಮಧ್ಯಪ್ರದೇಶದ ತೇಕನ್‌ಪುರದಲ್ಲಿರುವ ತನ್ನ ತರಬೇತಿ ಅಕಾಡೆಮಿಯಲ್ಲಿ ಭಾರತದ ಮೊದಲ ಡ್ರೋನ್ ಯುದ್ಧ ಶಾಲೆ ಆರಂಭಿಸಿದೆ.
ತೇಕನ್‌ಪುರ: ಪಹಲ್ಗಾಂ ನರಮೇಧ, ಆಪರೇಷನ್ ಸಿಂದೂರದ ಬಳಿಕ ದೇಶದ ಗಡಿಗಳಲ್ಲಿ ಅಪಾಯ ಹೆಚ್ಚುತ್ತಿರುವ ನಡುವೆಯೇ, ಭಾರತೀಯ ಸೇನೆ ಮಧ್ಯಪ್ರದೇಶದ ತೇಕನ್‌ಪುರದಲ್ಲಿರುವ ತನ್ನ ತರಬೇತಿ ಅಕಾಡೆಮಿಯಲ್ಲಿ ಭಾರತದ ಮೊದಲ ಡ್ರೋನ್ ಯುದ್ಧ ಶಾಲೆ ಆರಂಭಿಸಿದೆ.
ಈ ಡ್ರೋನ್ ಯುದ್ಧ ಶಾಲೆಯಲ್ಲಿ ಆಕ್ರಮಣಕಾರಿ, ರಕ್ಷಣಾತ್ಮಕ ಮಾನವ ರಹಿತ ವೈಮಾನಿಕ ಸಾಮರ್ಥ್ಯಗಳನ್ನು ನಿರ್ಮಿಸುವುದು ಹೇಗೆ , ಡ್ರೋನ್ ಪೈಲಟಿಂಗ್, ಡೋನ್ ನಿರ್ವಹಣೆ ತಂತ್ರ, ಸಂಶೋಧನೆ ಸೇರಿದಂತೆ ವಿವಿಧ ವಿಚಾರಗಳನ್ನು ಕಲಿಸಿಕೊಡಲಾಗುತ್ತದೆ. 40 ಅಧಿಕಾರಿಗಳನ್ನೊಳಗೊಂಡ ಮೊದಲ ಬ್ಯಾಚ್ ಈಗಾಗಲೇ ಒಂದು ವಾರದ ತರಬೇತಿ ಪೂರ್ಣಗೊಳಿಸಿದೆ . ಇದರಲ್ಲಿ ಬಿಎಸ್‌ಎಫ್ ಮತ್ತು ಎಸ್‌ಟಿಸಿಯ ಕಮಾಂಡೆಂಟ್ ಮತ್ತು ಸೆಕೆಂಡ್ ಇನ್ ಕಮಾಂಡ್ ಮಟ್ಟದ ಅಧಿಕಾರಿಗಳಿದ್ದರು. ಪ್ರಸ್ತುತ 47 ಅಧಿಕಾರಿಗಳ 2ನೇ ಗುಂಪು ಆರು 6 ವಾರಗಳ ತರಬೇತಿಗೆ ದಾಖಲಾಗಿದ್ದು, ಇಲ್ಲಿಯೂ ವಿವಿಧ ಶ್ರೇಣಿಯ ಸಿಬ್ಬಂದಿಯಿದ್ದಾರೆ.