ಸಾರಾಂಶ
ಸರ್ಕಾರಿ ಸ್ವಾಯತ್ತತೆಯಲ್ಲಿರುವ ಬಿಎಸ್‌ಎನ್‌ಎಲ್ ಸ್ಥಳೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಆಗಸ್ಟ್ ಮಾಹೆಗೆಲ್ಲಾ ಭಾರತದಾದ್ಯಂತ 4ಜಿ ಸೇವೆಗಳನ್ನು ಆರಂಭಿಸಲಿದೆ.
ನವದೆಹಲಿ: ಸರ್ಕಾರಿ ಸ್ವಾಯತ್ತತೆಯಲ್ಲಿರುವ ಬಿಎಸ್‌ಎನ್‌ಎಲ್ ಸ್ಥಳೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಆಗಸ್ಟ್ ಮಾಹೆಗೆಲ್ಲಾ ಭಾರತದಾದ್ಯಂತ 4ಜಿ ಸೇವೆಗಳನ್ನು ಆರಂಭಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಈಗಾಗಲೇ ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಕಳೆದ ವರ್ಷ ಪಂಜಾಬ್‌ನಲ್ಲಿ 4ಜಿ ಸೇವೆಗಳನ್ನು ಆರಂಭಿಸಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದರಂತೆ ಇಡೀ ದೇಶದಲ್ಲಿ ಆಗಸ್ಟ್ ಮಾಹೆಗೆಲ್ಲಾ ಬಿಎಸ್‌ಎನ್‌ಎಲ್ 4ಜಿ ಸೇವೆಗಳು ಆರಂಭವಾಗಲಿವೆ ಎಂದಿದ್ದಾರೆ.
ಟಿಸಿಎಸ್, ತೇಜಸ್ ನೆಟ್‌ವರ್ಕ್ ಮತ್ತು ಸರ್ಕಾರಿ ಸ್ವಾಮ್ಯದ ಐಟಿಐ 5ಜಿ ಗೆ ಅಪ್‌ಗ್ರೇಡ್ ಮಾಡಬಹುದಾದ 4ಜಿ ನೆಟ್‌ವರ್ಕ್ ಅನ್ನು ನಿಯೋಜಿಸಲು ಸುಮಾರು 19,000 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಪಡೆದುಕೊಂಡಿವೆ. ಇದರಿಂದ 1.12 ಲಕ್ಷ 4ಜಿ ಮತ್ತು 5ಜಿ ಸೇವೆಗಳನ್ನು ನೀಡುವ ಟವರ್‌ಗಳನ್ನು ಸ್ಥಾಪಿಸಿ ಬಿಎಸ್‌ಎನ್‌ಎಲ್ ಅನ್ನು ಉನ್ನತೀಕರಣಗೊಳಿಸಲು ಮುಂದಾಗಿದೆ ಎಂದಿದ್ದಾರೆ.