ಸಾರಾಂಶ
ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಬಸ್ ಮೇಲೆ ಗುಡ್ಡ ಕುಸಿದು 18 ಜನರು ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ. ಸಾವಿನ ಸಂಖ್ಯೆ ಏರುವ ಭೀತಿಯಿದೆ.
- ಹಿಮಾಚಲದ ಬಿಲಾಸಪುರ ಜಿಲ್ಲೆಯಲ್ಲಿ ಘೋರ ದುರಂತ
- ಬಸ್ಸಿನಲ್ಲಿರುವ ಇನ್ನೂ 15 ಜನರಿಗಾಗಿ ರಕ್ಷಣೆ- ಘಟನೆ ಬಗ್ಗೆ ರಾಷ್ಟ್ರಪತಿ, ಮೋದಿ, ಶಾ ಆಘಾತ
ಶಿಮ್ಲಾ: ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಬಸ್ ಮೇಲೆ ಗುಡ್ಡ ಕುಸಿದು 18 ಜನರು ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ. ಸಾವಿನ ಸಂಖ್ಯೆ ಏರುವ ಭೀತಿಯಿದೆ. 35 ಜನರಿದ್ದ ಬಸ್ ಮರೋ ತನ್‌ನಿಂದ ಕಲೌಲ್‌ವರೆಗೆ ಪ್ರಯಾಣಿಸುತ್ತಿತ್ತು. ಜಿಲ್ಲೆಯ ಬಾಲ್ಲು ಬ್ರಿಜ್ ಬಳಿ ಬರುವಾಗಿ ದಿಢೀರನೆ ಗುಡ್ಡ ಕುಸಿದು, ಬಸ್ಸಿನ ಮೇಲೆ ಕಲ್ಲು, ಮಣ್ಣು ಬಿದ್ದಿದೆ. ಅದರ ರಭಸಕ್ಕೆ ಬಸ್ಸು ಸಂಪೂರ್ಣವಾಗಿ ಮಣ್ಣಿನಲ್ಲಿ ಹೂತುಹೋಗಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಪಡೆಗಳು ಧಾವಿಸಿ, ರಾತ್ರಿಯಾದರೂ ಲೈಟ್ ಹಾಕಿಕೊಂಡ ರಕ್ಷಣಾ ಕಾರ್ಯ ಆರಂಭಿಸಿವೆ. ಒಂದು ಮಗುವನ್ನು ರಕ್ಷಿಸಲಾಗಿದ್ದು, ಬಸ್ಸಿನಲ್ಲಿ ಇದ್ದ ಇನ್ನೂ ಸುಮಾರು 15 ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಇಡೀ ಗುಡ್ಡವೇ ಕುಸಿದು ಬಸ್ಸಿನ ಮೇಲೆ ಬಿದ್ದಿದ್ದರಿಂದ ಅನಾಹುತ ತೀವ್ರವಾಗಿದೆ. ರಕ್ಷಣಾ ಕಾರಾರಯಚರಣೆಗೆ ಕೂಡ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮೋದಿ, ಮುರ್ಮು ಆಘಾತ: ರಾಷ್ಟ್ರಪತಿ ದ್ರೌಪದಿ ಮುರ್ಮು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಿಮಾಚಲ ಸಿಎಂ ಸುಖು ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ತುರ್ತು ರಕ್ಷಣಾ ಕಾರ್ಯಕ್ಕೆ ಸೂಚಿಸಿದ್ದಾರೆ. ಸುಖು ಅವರು ರಕ್ಷಣಾ ಕಾರ್ಯದ ಖುದ್ದು ಉಸ್ತುವಾರಿ ಹೊತ್ತು ಎಲ್ಲದರ ಮೇಲ್ವಿಚಾರಣೆ ಮಾಡುತ್ತಿದ್ದಾರೆ.