ಹಿಮಾಚಲ, ಪಂಜಾಬ್‌ ಮೋದಿ ಭರಪೂರ ನೆರೆ ಪರಿಹಾರ

| N/A | Published : Sep 10 2025, 01:03 AM IST

ಹಿಮಾಚಲ, ಪಂಜಾಬ್‌ ಮೋದಿ ಭರಪೂರ ನೆರೆ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಪ್ರವಾಹ ಪೀಡಿತ ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ಮಂಗಳವಾರ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ, ಪ್ರವಾಹ ಪೀಡಿತರ ಸಂಕಷ್ಟ ಆಲಿಸಿದರು. ಇದೇ ವೇಳೆ ಮೋದಿ ಹಿಮಾಚಲಕ್ಕೆ1500 ಕೋಟಿ ರು. ಹಾಗೂ ಪಂಜಾಬ್‌ಗೆ 1600 ಕೋಟಿ ರು. ತಕ್ಷಣದ ಪರಿಹಾರ ಘೋಷಿಸಿದರು.

  ಶಿಮ್ಲಾ/ ಚಂಡೀಗಢ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಪ್ರವಾಹ ಪೀಡಿತ ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ಮಂಗಳವಾರ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ, ಪ್ರವಾಹ ಪೀಡಿತರ ಸಂಕಷ್ಟ ಆಲಿಸಿದರು. ಇದೇ ವೇಳೆ ಮೋದಿ ಹಿಮಾಚಲಕ್ಕೆ1500 ಕೋಟಿ ರು. ಹಾಗೂ ಪಂಜಾಬ್‌ಗೆ 1600 ಕೋಟಿ ರು. ತಕ್ಷಣದ ಪರಿಹಾರ ಘೋಷಿಸಿದರು.

ಈ ವೇಳೆ ಮಾತನಾಡಿದ ಅವರು, ‘ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರ ಪರವಾಗಿ ಕೇಂದ್ರ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ’ ಎನ್ನುವ ಭರವಸೆ ನೀಡಿದರು.

2 ರಾಜ್ಯಕ್ಕೆ ಭೇಟಿ:

ಮೊದಲು ಮೋದಿ ಹಿಮಾಚಲ ಪ್ರದೇಶಕ್ಕೆ ನಂತರ ಪಂಜಾಬ್‌ಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತ ಪರಿಣಾಮ ಗಳನ್ನು ಅವಲೋಕಿಸಿ ವೈಮಾನಿಕ ಪರೀಕ್ಷೆ ನಡೆಸಿದರು. ಕಾಂಗ್ರಾದಲ್ಲಿ ಸಭೆ ನಡೆಸಿ ತತಕ್ಷಣ ಪರಿಣಾಮವಾಗಿ ಹಿಮಾಚಲ ಪ್ರದೇಶಕ್ಕೆ 1500 ಕೋಟಿ ರು. ಪರಿಹಾರ ಘೋಷಿಸಿದರು. ಮೃತರ ಕುಟುಂಬಸ್ಥರಿಗೆ 2 ಲಕ್ಷ ರು. ಪರಿಹಾರ ಮತ್ತು ಗಾಯಗೊಂಡವರಿಗೆ 50 ಸಾವಿರು ರು. ನೆರವು ಘೋಷಿಸಿದರು.

ಬಳಿಕ ಪಂಜಾಬ್‌ನ ಗುರುದಾಸ್ಪುರಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ , ಪರಿಸ್ಥಿತಿ ಮಾಹಿತಿ ಪಡೆದುಕೊಂಡರು. ಸಂತ್ರಸ್ತರು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಆಪದಾ ಮಿತ್ರ ರಕ್ಷಣಾ ತಂಡದೊಂದಿಗೆ ಸಂವಾದ ನಡೆಸಿದರು. ಮೃತರ ಅವಲಂಬಿತರಿಗೆ 2 ಲಕ್ಷ ರು, ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರು. ಪರಿಹಾರ ಘೋಷಿಸಿದರು

Read more Articles on