ಹೃದಯಾಘಾತವಾದರೂ 48ಜನರ ಜೀವ ಕಾಪಾಡಿ ಪ್ರಾಣ ಬಿಟ್ಟ ಬಸ್ ಚಾಲಕ
1 Min read
Author : KannadaprabhaNewsNetwork
Published : Oct 30 2023, 12:30 AM IST
Share this Article
FB
TW
Linkdin
Whatsapp
ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದ ಒಂದು ವಿಹಂಗಮ ನೋಟ. | Kannada Prabha
Image Credit: KP
ಒಡಿಶಾದ ಸರಣ್‌ಗಢದಿಂದ ಭುವನೇಶ್ವರ್‌ಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಮಾರ್ಗಮಧ್ಯೆ ಹೃದಯ ಸ್ತಂಭನವಾದರೂ ಆತನ ಸಮಯಪ್ರಜ್ಞೆಯಿಂದ 48 ಜನರ ಜೀವ ಉಳಿದಿದೆ
ವನೇಶ್ವರ್: ಒಡಿಶಾದ ಸರಣ್‌ಗಢದಿಂದ ಭುವನೇಶ್ವರ್‌ಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಮಾರ್ಗಮಧ್ಯೆ ಹೃದಯ ಸ್ತಂಭನವಾದರೂ ಆತನ ಸಮಯಪ್ರಜ್ಞೆಯಿಂದ 48 ಜನರ ಜೀವ ಉಳಿದಿದೆ. ಕಂದಮಹಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಬಸ್ ಚಾಲಕನಿಗೆ ಎದೆನೋವು ಕಾಣಿಸಿಕೊಂಡ ಮರುಕ್ಷಣವೇ ಬಸ್ಸನ್ನು ಪಕ್ಕದಲ್ಲಿದ್ದ ಗೋಡೆಗೆ ಜಜ್ಜಿಕೊಂಡು ಹೋಗಿ ನಿಲ್ಲುವಂತೆ ಮಾಡಿದ್ದಾನೆ. ಈ ಮೂಲಕ ಸಂಭವನೀಯ ರಸ್ತೆ ಅಪಘಾತವನ್ನು ಸನಾ ಪ್ರಧಾನ್ ಎಂಬ ಚಾಲಕ ತಪ್ಪಿಸಿದರೂ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಹೃದಯ ಸ್ತಂಭನದಿಂದ ಅಸುನೀಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಬಸ್ ಮತ್ತೊಬ್ಬ ಚಾಲಕನ ಸಹಾಯದಿಂದ ಗಮ್ಯ ಸ್ಥಾನವಾದ ಭುವನೇಶ್ವರದತ್ತ ತೆರಳಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.