ಬೈಜು ರವೀಂದ್ರನ್‌ ವಜಾಕ್ಕೆ ಬೈಜೂಸ್‌ ಷೇರುದಾರರ ನಿರ್ಣಯ

| Published : Feb 24 2024, 02:31 AM IST / Updated: Feb 24 2024, 07:49 AM IST

ಬೈಜು ರವೀಂದ್ರನ್‌ ವಜಾಕ್ಕೆ ಬೈಜೂಸ್‌ ಷೇರುದಾರರ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಫೆಮಾ ಉಲ್ಲಂಘನೆ ಆರೋಪ ಹೊತ್ತಿರುವ ಬೈಜು ಸಂಸ್ಥಾಪಕ ರವೀಂದ್ರನ್‌ ಮತ್ತು ಅವರ ಕುಟುಂಬವನ್ನು ವಜಾ ಮಾಡಲು ಕಂಪನಿಯ ವಿಶೇಷ ಷೇರುದಾರರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ

ನವದೆಹಲಿ: ಬೈಜೂಸ್‌ ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್‌ ಅವರನ್ನು ಕಂಪನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಹುದ್ದೆಯಿಂದ ವಜಾಗೊಳಿಸಲು ಕಂಪನಿಯ ವಿಶೇಷ ಷೇರುದಾರರ ಸಭೆ ನಿರ್ಣಯ ಮಾಡಿದೆ. 

9300 ಕೋಟಿ ರು. ಫೆಮಾ ನಿಯಮ ಉಲ್ಲಂಘನೆ ಆರೋಪ ಹೊತ್ತು ತನಿಖಾ ಸಂಸ್ಥೆಯಿಂದ ಕಠಿಣ ಲುಕ್‌ಔಟ್‌ ನೋಟಿಸ್‌ಗೆ ಗುರಿಯಾಗಿರುವ ಕಾರಣ ಅವರ ವಿರುದ್ಧ ಈ ನಿರ್ಣಯ ಕೈಗೊಳ್ಳಲಾಗಿದೆ.

ಶುಕ್ರವಾರ ಕರೆಯಲಾಗಿದ್ದ ಸಭೆಗೆ ರವೀಂದ್ರನ್ ಮತ್ತು ಅವರ ಕುಟುಂಬ ಗೈರಾಗಿತ್ತು. ಆದರೆ ವಿಡಿಯೋ ಸಂದೇಶವೊಂದನ್ನು ಕಳುಹಿಸಿರುವ ರವೀಂದ್ರನ್‌, ‘ಈ ಸಭೆ ನಡೆಸುವುದೇ ಕಾನೂನುಬಾಹಿರವಾಗಿದ್ದು, ಇಲ್ಲಿ ತೆಗೆದುಕೊಂಡ ನಿರ್ಣಯಗಳೂ ಮುಂದಿನ ವಿಚಾರಣೆವರೆಗೆ ಮಾನ್ಯತೆ ಹೊಂದುವುದಿಲ್ಲ’ ಎಂದು ತಿಳಿಸಿದ್ದರು. 

ಈ ನಡುವೆ ಸಂಸ್ಥೆಯ ನಾಲ್ಕು ಷೇರುದಾರರು ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ರವೀಂದ್ರನ್‌ ಹಾಗೂ ಕುಟುಂಬಸ್ಥರ ವಿರುದ್ಧ ದಾವೆ ಹೂಡಿದ್ದಾರೆ.