ದಿವಂಗತ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಕೆಫೆ‌ ಕಾಫಿ‌ ಡೇ ದಿವಾಳಿ ಪ್ರಕ್ರಿಯೆ ಆರಂಭಕ್ಕೆ ಅನುಮತಿ

| Published : Aug 11 2024, 01:36 AM IST / Updated: Aug 11 2024, 04:29 AM IST

ಸಾರಾಂಶ

ಕೆಲ ವರ್ಷಗಳಿಂದ ನಷ್ಟದಲ್ಲಿರುವ ದಿವಂಗತ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಕೆಫೆ‌ ಕಾಫಿ‌ ಡೇ ಕಂಪನಿಯ ಐಡಿಬಿಐಗೆ ಸಂಬಂಧಿಸಿದ ದಿವಾಳಿ ಪ್ರಕ್ರಿಯೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅನುಮತಿ ನೀಡಿದೆ.

ಬೆಂಗಳೂರು: ಕೆಲ ವರ್ಷಗಳಿಂದ ನಷ್ಟದಲ್ಲಿರುವ ದಿವಂಗತ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಕೆಫೆ‌ ಕಾಫಿ‌ ಡೇ ಕಂಪನಿಯ ಐಡಿಬಿಐಗೆ ಸಂಬಂಧಿಸಿದ ದಿವಾಳಿ ಪ್ರಕ್ರಿಯೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅನುಮತಿ ನೀಡಿದೆ.

ಕೆಫೆ ಕಾಫಿ ಡೇ 228 ಕೋಟಿ ರು. ಕಟಬಾಕಿ ಹೊಂದಿದೆ ಎಂದು ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ಆ. 8ರಂದು ಪುರಸ್ಕರಿಸಿದ್ದ ಎನ್‌ಸಿಎಲ್‌ಟಿಯ ಬೆಂಗಳೂರು ಪೀಠ, ಸಾಲದ ಸುಳಿಯಲ್ಲಿ ಸಿಲುಕಿರುವ ಕಂಪನಿಯನ್ನು ನೋಡಿಕೊಳ್ಳಲು ವೃತ್ತಿಪರ ಮಧ್ಯಂತರ ನಿರ್ಣಯಕಾರರನ್ನು ನೇಮಿಸಿದೆ.

2019ರಲ್ಲಿ ಕಾಫಿ ಡೇ ಸಂಸ್ಥಾಪಕ ಅಧ್ಯಕ್ಷ ವಿ.ಜಿ. ಸಿದ್ದಾರ್ಥ್‌ ಅವರ ಸಾವಿನ ಬಳಿಕ ಕಂಪನಿ ನಷ್ಟ ಅನುಭವಿಸುತ್ತಿದ್ದು, ತನ್ನ ಆಸ್ತಿಗಳನ್ನು ಮಾರುವ ಮೂಲಕ ಸಾಲಗಳನ್ನು ತೀರಿಸುತ್ತಿತ್ತು.

ಎನ್‌ಸಿಎಲ್‌ಟಿಯ ಇದೇ ಪೀಠ 2023ರ ಜು.20ರಂದು ಕೆಫೆ ಕಾಫಿ ಡೇ ಚೈನ್ ಒಡೆತನ ಹೊಂದಿರುವ ಮತ್ತು ನಿರ್ವಹಿಸುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ (ಸಿಡಿಜಿಎಲ್) ವಿರುದ್ಧ ಇಂಡಸ್ ಇಂಡ್‌ ಬ್ಯಾಂಕ್‌ ಹೂಡಿದ್ದ 98 ಕೋಟಿ ರು. ದಿವಾಳಿತನದ ಮನವಿಯನ್ನು ಒಪ್ಪಿಕೊಂಡಿತ್ತು.

ಕೆನೆಪದರ ರದ್ದತಿ ಕುರಿತಾದ ಸುಪ್ರೀಂ ತೀರ್ಪಿಗೆ ಶಾಸನ ತರಬೇಕಿತ್ತು: ಖರ್ಗೆ

 ನವದೆಹಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಕೆನೆಪದರ ರೂಪಿಸಬೇಕು ಎಂಬ ಸುಪ್ರೀಂಕೋರ್ಟ್‌ ತೀರ್ಪು ರದ್ದುಗೊಳಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಸೂದೆ ಮಂಡನೆ ಮಾಡಬೇಕಿತ್ತು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಕೆನೆಪದರವನ್ನು ಜಾರಿಗೊಳಿಸುವ ಮೂಲಕ ಯಾರಿಗೆ ಲಾಭ ಮಾಡಿಕೊಡಲು ಬಯಸಿದ್ದೀರಿ? ಕೆನೆಪದರವನ್ನು ಅನುಷ್ಠಾನಕ್ಕೆ ತಂದು ಅಸ್ಪೃಶ್ಯರಿಗೆ ಅವಕಾಶ ನಿರಾಕರಿಸುತ್ತಿದ್ದೀರಿ? ಸಹಸ್ರಾರು ವರ್ಷಗಳಿಂದ ಲಾಭ ಪಡೆದವರಿಗೆ ಅದನ್ನು ಕೊಡುತ್ತಿದ್ದೀರಿ. ಇದನ್ನು ಖಂಡಿಸುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರ್ಕಾರ ಕೆಲವೇ ತಾಸುಗಳಲ್ಲಿ ಮಸೂದೆಗಳನ್ನು ಸಿದ್ಧಗೊಳಿಸುತ್ತದೆ. ಆದರೆ ತೀರ್ಪು ಬಂದು 15 ದಿನಗಳಾದರೂ ಏನೂ ಮಾಡಿಲ್ಲ. ಮೀಸಲಾತಿಯನ್ನೇ ಅಂತ್ಯಗೊಳಿಸಲು ಬಿಜೆಪಿ ಬಯಸುತ್ತಿದೆ ಎಂದು ದೂರಿದರು.ಅಸ್ಪೃಶ್ಯತೆ ಇರುವವರೆಗೂ ಮೀಸಲಾತಿ ಇರಬೇಕು, ಇರುತ್ತದೆ. ಅದಕ್ಕಾಗಿ ನಾವು ಹೋರಾಟ ಮಾಡುತ್ತೇವೆ. ಕೆನೆಪದರ ವಿಷಯ ಪ್ರಸ್ತಾಪಿಸಿರುವ ಸುಪ್ರೀಂಕೋರ್ಟ್‌ನ ಜಡ್ಜ್‌ಗಳು ಎಸ್ಸಿ, ಎಸ್ಟಿಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದಂತಿಲ್ಲ ಎಂದರು.ರಾಜ್ಯ ಸರ್ಕಾರಗಳು ಎಸ್ಸಿ, ಎಸ್ಟಿ ಒಳ ಮೀಸಲು ನೀಡುವ ಅಧಿಕಾರ ಹೊಂದಿವೆ ಎಂದು ಸುಪ್ರೀಂಕೋರ್ಟ್‌ನ ಸಪ್ತ ಸದಸ್ಯ ಪೀಠ ಮಾಸಾರಂಭದಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು. ಜತೆಗೆ, ಆ ಸಮುದಾಯಗಳಲ್ಲೇ ಕೆನೆಪದರವನ್ನು ರೂಪಿಸಿ, ಕೆನೆಪದರದ ಮೇಲಿರುವವರಿಗೆ ಮೀಸಲಾತಿ ನಿರಾಕರಿಸಬೇಕು ಎಂದು ಹೇಳಿತ್ತು.

ಆರೆಸ್ಸೆಸ್ ಒಪ್ಪದ ತ್ರಿವರ್ಣದ ಬಗ್ಗೆ ಮೋದಿ ಪ್ರಚಾರ: ಕಾಂಗ್ರೆಸ್‌ ಟೀಕೆನ

ವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರ ಸೈದ್ಧಾಂತಿಕ ಸಂಬಂಧಿಯಾಗಿರುವ ಆರ್‌ಎಸ್‌ಎಸ್‌ ಎಂದೂ ಒಪ್ಪದ ತ್ರಿವರ್ಣ ಧ್ವಜವನ್ನು ಅವರೀಗ ರಾಷ್ಟ್ರೀಯ ಚಿಹ್ನೆಯಾಗಿ ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.‘ಹರ್‌ ಘರ್‌ ತಿರಂಗಾ’ ಚಳುವಳಿಯನ್ನು ಬೆಂಬಲಿಸಿ ತಮ್ಮ ಸಾಮಾಜಿಕ ಖಾತೆಗಳಲ್ಲಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲು ಶುಕ್ರವಾರ ದೇಶವಾಸಿಗಳಿಗೆ ಕರೆ ನೀಡಿದ್ದ ಪ್ರಧಾನಿ ತಮ್ಮ ಎಕ್ಸ್‌ ಖಾತೆಯ ಪ್ರೊಫೈಲ್‌ ಚಿತ್ರದಲ್ಲಿ ತ್ರಿವರ್ಣ ಧ್ವಜವನ್ನು ಹಾಕಿಕೊಂಡಿದ್ದರು.

ಅವರ ಈ ನಡೆಯನ್ನು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ತ್ರಿವರ್ಣವನ್ನು ರಾಷ್ಟ್ರೀಯ ಧ್ವಜವನ್ನಾಗಿಸುವ ಕಾಂಗ್ರೆಸ್‌ ನಿರ್ಧಾರವನ್ನು ಆರ್‌ಎಸ್‌ಎಸ್‌ನ ಎರಡನೆ ಮುಖ್ಯಸ್ಥನಾಗಿರುವ ಎಮ್‌.ಎಸ್‌. ಗೋಲ್ವಾಲ್ಕರ್‌ ವಿರೋಧಿಸಿದ್ದು, ಅದನ್ನು ಕೋಮುವಾದವೆಂದು ಕರೆದಿದ್ದರು. ಸಂಘದ ಮುಖವಾಣಿಯಾಗಿರುವ ಆರ್ಗನೈಸರ್‌ ಕೂಡ 1947ರಲ್ಲಿ ಯಾವ ಹಿಂದುವೂ ತ್ರಿವರ್ಣವನ್ನು ಒಪ್ಪಿ ಗೌರವಿಸುವುದಿಲ್ಲ ಹಾಗೂ ಇದು ದೇಶಕ್ಕೆ ಮಾರಕ ಎಂದು ಬರೆದಿತ್ತು. 

2001ರ ವರೆಗೆ ತನ್ನ ಮುಖ್ಯ ಕಚೇರಿಯಲ್ಲಿ ತ್ರಿವರ್ಣವನ್ನೇ ಹಾರಿಸದ ಸಂಘ ಅದನ್ನು ಅಪರಾಧವೆಂದು ಪರಿಗಣಿಸಿತ್ತು’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ಅನ್ಯ ಬಣ್ಣಗಳು ಕೋಮುವಾದವನ್ನು ಸೂಚಿಸುವ ಕಾರಣ ಕೇಸರಿಯೊಂದೇ ಧ್ವಜದಲ್ಲಿರಬೇಕು ಎಂದು ಆರ್‌ಎಸ್‌ಎಸ್‌ 2015ರಲ್ಲಿ ಹೇಳಿದ್ದನ್ನು ನೆನಪಿಸಿದ್ದಾರೆ.