ಸಾರಾಂಶ
ಬಂಗಾಳದಲ್ಲಿ ಸಿಂಹದ ನಾಮಕರಣ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ಸಿಂಹಗಳಿಗಿಟ್ಟಿದ್ದ ಹೆಸರನ್ನು ಕೂಡಲೇ ಬದಲಿಸುವಂತೆ ಕಲ್ಕತಾ ಹೈಕೋರ್ಟ್ ಸೂಚಿಸಿದೆ.
ಕೋಲ್ಕತಾ: ಪಶ್ಚಿಮ ಬಂಗಾಳದ ಸಿಲಿಗುರಿ ಸಫಾರಿ ಪಾರ್ಕ್‌ನಲ್ಲಿರುವ ಸಿಂಹಗಳಿಗೆ ಇಡಲಾಗಿರುವ ಸೀತಾ ಮತ್ತು ಅಕ್ಬರ್ ಎಂಬ ಹೆಸರುಗಳನ್ನು ಬದಲಾಯಿಸುವಂತೆ ಕಲ್ಕತಾ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಸೀತಾ ಮತ್ತು ಅಕ್ಬರ್ ಎಂಬ ಹೆಸರುಗಳನ್ನಿಟ್ಟಿರುವ ಸಿಂಹಗಳನ್ನು ಒಂದೇ ಕಡೆ ಬಿಟ್ಟಿರುವುದನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಅಲ್ಲದೇ ಈ ವಿಷಯ ಭಾರಿ ವಿವಾದಕ್ಕೆ ಕಾರಣವಾಗಿತ್ತು.ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇಂತಹ ಹೆಸರುಗಳನ್ನು ಏಕೆ ಇಡುತ್ತೀರಿ?
ಹೀಗಾದರೆ ಪ್ರಮುಖ ವ್ಯಕ್ತಿಗಳಿಗೆ ಗೌರವ ಕೊಟ್ಟಂತಾಗುತ್ತದೆಯೇ ಎಂದು ಪ್ರಶ್ನಿಸಿ, ಹೆಸರು ಬದಲಾಯಿಸಲು ಸೂಚಿಸಿದೆ.