ಪಶ್ಚಿಮ ಬಂಗಾಳದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಲು ಬಂಗಾಳ ಮಾತ್ರವಲ್ಲದೆ, ನೆರೆಯ ಬಿಹಾರ ಜಾರ್ಖಂಡ್‌ನಂತಹ ನೆರೆಯ ರಾಜ್ಯಗಳು ಸೇರಿ ಹಲವು ರಾಜ್ಯಗಳ ಸಾವಿರಾರು ಬಿಜೆಪಿ ಬೆಂಬಲಿಗರು ಶನಿವಾರ ಕೋಲ್ಕತಾಗೆ ಆಗಮಿಸಿದ್ದರು 

 ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಲು ಬಂಗಾಳ ಮಾತ್ರವಲ್ಲದೆ, ನೆರೆಯ ಬಿಹಾರ ಜಾರ್ಖಂಡ್‌ನಂತಹ ನೆರೆಯ ರಾಜ್ಯಗಳು ಸೇರಿ ಹಲವು ರಾಜ್ಯಗಳ ಸಾವಿರಾರು ಬಿಜೆಪಿ ಬೆಂಬಲಿಗರು ಶನಿವಾರ ಕೋಲ್ಕತಾಗೆ ಆಗಮಿಸಿದ್ದರು.

ಇದು ಬ್ರಿಗೇಡ್ ಪರೇಡ್ ಮೈದಾನವನ್ನು ಕೇಸರಿ ಸಮುದ್ರವನ್ನಾಗಿ ಪರಿವರ್ತಿಸಿತು.ನಿಯೋಜಿತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಅವರ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಎನ್‌ಡಿಎ ಆಡಳಿತದ ರಾಜ್ಯಗಳ ಹಲವಾರು ಉನ್ನತ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಿದ್ದರು.

ಸಮಾರಂಭದ ವೇಳೆ ಬಿಜೆಪಿ ಧ್ವಜಗಳು ಮತ್ತು ಕೇಸರಿ ಬ್ಯಾನರ್‌

ಸಮಾರಂಭದ ವೇಳೆ ಬಿಜೆಪಿ ಧ್ವಜಗಳು ಮತ್ತು ಕೇಸರಿ ಬ್ಯಾನರ್‌ಗಳನ್ನು ಹಿಡಿದ ಬೆಂಬಲಿಗರ ಗುಂಪುಗಳು ಜಮಾಯಿಸಿ, ನಂತರ ‘ಜೈ ಶ್ರೀ ರಾಮ್’ ಘೋಷಣೆ ಮೊಳಗಿಸಿದರು

ಇದೇ ವೇಲೆ, ಧೋತಿ-ಪೈಜಾಮ ಧರಿಸಿದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಈ ಐತಿಹಾಸಿಕ ಸಂದರ್ಭವನ್ನು ಖುದ್ದಾಗಿ ವೀಕ್ಷಿಸಲು ಕೆನಡಾದಿಂದ ಬಂದಿರುವುದಾಗಿ ಹೇಳಿದರು. 

ಚುರುಮುರಿ ವಿತರಣೆ:

ಕಾರ್ಯಕ್ರಮಕ್ಕೆ ಸ್ಥಳೀಯ ಮೆರುಗು ನೀಡುವ ಸಲುವಾಗಿ, ‘ಝಾಲಮುರಿ’ (ಚುರುಮುರಿ) ಪ್ಯಾಕೆಟ್‌ಗಳನ್ನು ಸ್ಥಳದಲ್ಲಿ ಬೆಂಬಲಿಗರಿಗೆ ವಿತರಿಸಲಾಯಿತು.ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ ಝಾರ್‌ಗ್ರಾಮದ ರಸ್ತೆ ಬದಿಯ ಅಂಗಡಿಯಲ್ಲಿ ಚುರುಮುರಿ ತಿಂದಿದ್ದರು. ಇದು ಚುನಾವಣಾ ಕಾವು ಹೆಚ್ಚಿಸಿತ್ತು.