(ಚಿಕ್ಕಮಗಳೂರು)ಶೃಂಗೇರಿ ವಿಧಾನಸಭಾ ಕ್ಷೇತ್ರದ ಸೋಲು, ಗೆಲುವಿನ ನ್ಯಾಯ ಅನ್ಯಾಯದ ಕುರಿತು ಕೊಪ್ಪದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಆಣೆ ಪ್ರಮಾಣ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ಥಾಮಿ ದೇವಸ್ಥಾನದ ಸನ್ನಿಧಾನಕ್ಕೆ ಶಿಫ್ಟ್‌ ಆಗಿದೆ.

ಎಸ್.ಎನ್.ರಾಮಸ್ವಾಮಿ, ಬಿ.ಎಸ್.ಸತೀಶ್ ಅದ್ದಾಡ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿದಿಗೆ ತೆರಳಿ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ ಕೊಪ್ಪ (ಚಿಕ್ಕಮಗಳೂರು)

ಶೃಂಗೇರಿ ವಿಧಾನಸಭಾ ಕ್ಷೇತ್ರದ ಸೋಲು, ಗೆಲುವಿನ ನ್ಯಾಯ ಅನ್ಯಾಯದ ಕುರಿತು ಕೊಪ್ಪದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಆಣೆ ಪ್ರಮಾಣ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ಥಾಮಿ ದೇವಸ್ಥಾನದ ಸನ್ನಿಧಾನಕ್ಕೆ ಶಿಫ್ಟ್‌ ಆಗಿದೆ.

ಬಿಜೆಪಿ ಕಾರ್ಯಕರ್ತರಾಗಿರುವ ಎಸ್.ಎನ್.ರಾಮಸ್ವಾಮಿ, ಬಿ.ಎಸ್.ಸತೀಶ್ ಅದ್ದಾಡ ಸೇರಿದಂತೆ ಪಕ್ಷದ ಕಾರ್ಯಕರ್ತರು ಶನಿವಾರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿದಿಗೆ ತೆರಳಿ ಪ್ರಾರ್ಥನೆ ಮಾಡಿಕೊಂಡರು.

1993 ರಿಂದಲೂ ಬಿಜೆಪಿಯಲ್ಲಿದ್ದೇನೆ. ಯಾವುದೇ ತರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡದೆ ಪಕ್ಷನಿಷ್ಠೆಯಿಂದ ಇದ್ದೇನೆ. ಏನಾದರು ತಪ್ಪುಮಾಡಿದ್ದರೆ ದೇವರು ಶಿಕ್ಷೆ ಕೊಡಲಿ ಇಲ್ಲವೆ, ವಿನಾಕಾರಣ ಅಪವಾದ ಹೊರಿಸುತ್ತಿರುವವರಿಗೆ ಸರಿಯಾದ ಶಿಕ್ಷೆಯಾಗಲಿ. 2023ರ ಮೇ 13ರ ಮತ ಎಣಿಕೆ ಸಂದರ್ಭದಲ್ಲಿ ಜೀವರಾಜ್ ಅಂಚೆ ಮತಗಳ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿದ ಅದ್ದಾಡ ಸತೀಶ್ ಪ್ರಾರ್ಥಿಸಿದರೆ, ಮೊದಲು ಜನತಾ ಪರಿವಾರದ ಎಚ್.ಜಿ ಗೊವೀಂದೆ ಗೌಡರ ಜೊತೆಗಿದ್ದೆ ಅವರ ರಾಜಕೀಯದ ನಿವೃತ್ತಿ ನಂತರ 2004 ರ ನಂತರದಲ್ಲಿ ಬಿಜೆಪಿ ಯಲ್ಲಿದ್ದೇನೆ ವಿನಾಕಾರಣ ಕೇಲವರು ಕಾಂಗ್ರೆಸ್ ಪಕ್ಷದವರಿಂದ ಹಣ ಪಡೆದು ಬಿಜೆಪಿ ಸೋಲಿಗೆ ಕಾರಣನಾಗಿದ್ದೇನೆ ಎನ್ನುವ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ.

43 ವರ್ಷಗಳ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸತ್ಯ ಅಸತ್ಯಗಳನ್ನು ದೇವರ ಮುಂದಿ ಡುತ್ತಿದ್ದೇನೆ. ಆ ದೇವರೆ ನೋಡಿಕೊಳ್ಳಲಿ ಎಂದು ಎಸ್ಎನ್ ರಾಮಸ್ವಾಮಿ ಬೇಡಿಕೊಂಡಿದ್ದಾರೆ.

ಸಂದರ್ಭದಲ್ಲಿ ಎಣಿಕೆ ಕೇಂದ್ರದ ಇವಿಎಂ ಮತ ಪೆಟ್ಟಿಗೆಗಳ ಬಿಜೆಪಿ ಏಜೆಂಟ್ಆಗಿ ಕಾರ್ಯ ನಿರ್ವಾಹಿಸಿದ ಶೆಟ್ಟಿಗದ್ದೆ ರಾಮಸ್ವಾಮಿ, ಈ ಇಬ್ಬರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯಲ್ಲಿ ಶನಿವಾರ ಪ್ರಾರ್ಥನೆ ಮಾಡಿಕೊಂಡಿದ್ದಾರೆ

ಬಿಜೆಪಿಯ ಕಿರಣ್ ಮಡಬಳ್ಳಿ ಮತ್ತು ಅನುಪ್ ನಾರ್ವೆ ಈ ಸಂದರ್ಭದಲ್ಲಿ ಜೊತೆಗಿದ್ದರು.