ಸಾರಾಂಶ
ಶಾಲಾ ಅವಧಿಯಲ್ಲಿ ಹಾಸ್ಟೆಲ್‌ನಲ್ಲಿದ್ದು ಪೋಷಕರ ಸಂಪರ್ಕ ಕಳೆದುಕೊಂಡು ಭಾವನಾತ್ಮಕವಾಗಿ ನೊಂದ ವಿದ್ಯಾರ್ಥಿಗಳಿಗೆಂದೇ ಕ್ಯಾಂಪಸ್ ಮದರ್ಸ್ ಎಂಬ ಹೊಸ ಯೋಜನೆ ಜಾರಿಗೆ ಐಐಟಿ ಖರಗ್‌ಪುರ ಮುಂದಾಗಿದೆ.
ಐಐಟಿ ಖರಗ್‌ಪುರದಲ್ಲಿ ಹೊಸ ಯೋಜನೆ
ಖರಗ್‌ಪುರ: ಶಾಲಾ ಅವಧಿಯಲ್ಲಿ ಹಾಸ್ಟೆಲ್‌ನಲ್ಲಿದ್ದು ಪೋಷಕರ ಸಂಪರ್ಕ ಕಳೆದುಕೊಂಡು ಭಾವನಾತ್ಮಕವಾಗಿ ನೊಂದ ವಿದ್ಯಾರ್ಥಿಗಳಿಗೆಂದೇ ಕ್ಯಾಂಪಸ್ ಮದರ್ಸ್ ಎಂಬ ಹೊಸ ಯೋಜನೆ ಜಾರಿಗೆ ಐಐಟಿ ಖರಗ್‌ಪುರ ಮುಂದಾಗಿದೆ.ಈ ಯೋಜನೆಯಡಿ, ತಾಯ್ತನದ ಅನುಭವ ಹೊಂದಿರುವ ಮಹಿಳೆಯರಿಗೆ ಕ್ಯಾಂಪಸ್‌ನಲ್ಲಿ ಮಕ್ಕಳೊಂದಿಗೆ ಬೆರೆಯುವ ಅವಕಾಶ ಕಲ್ಪಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ತಾಯಂದಿರಿಂದ ದೂರವಾಗಿರುವ ಕೊರತೆ ನೀಗಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಅದೇ ಕಾಲೇಜಿನ ಬೋಧನಾ ಸಿಬ್ಬಂದಿ ಅಥವಾ ಇತರೆ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುವುದು. ಅವರು ಪ್ರತಿದಿನ ಅವಶ್ಯಕತೆ ಇರುವ ಮಕ್ಕಳ ಆಗುಹೋಗುಗಳನ್ನು ಗಮನಿಸುವ ಅವರೊಂದಿಗೆ ನಿತ್ಯ ಸಂವಾದ ನಡೆಸುವ ಕೆಲಸ ಮಾಡಲಿದ್ದಾರೆ. ಐಐಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಮಾನಸಿಕವಾಗಿ ಬಳಲಿರುವ ವಿದ್ಯಾರ್ಥಿಗಳಿಗೆ ಭಾವನಾತ್ಮಕ ಬೆಂಬಲ ನೀಡುವ ಕಾರಣಕ್ಕಾಗಿ ಆಡಳಿತ ಮಂಡಳಿ ಈ ಕ್ರಮ ಜಾರಿಗೆ ತರಲು ಮುಂದಾಗಿದೆ.