ಸಾರಾಂಶ
ಇರಾನ್‌ಗೆ ಅಂಗಾಂಗ ಕಳ್ಳಸಾಗಣೆ ಮಾಡುತ್ತಿದ್ದ ಜಾಲಕ್ಕೆ ಕೇರಳ ಮೂಲದ ವ್ಯಕ್ತಿಯೇ ಕಿಂಗ್‌ಪಿನ್ ಎನ್ನುವುದು ಬಯಲಾದ ಬೆನ್ನಲ್ಲೇ, ಕರ್ನಾಟಕದಲ್ಲೂ ಈ ಜಾಲ ಹರಡಿದೆ ಎಂದು ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಿಂದ ತಿಳಿದುಬಂದಿದೆ.
ಕೊಚ್ಚಿ: ಇರಾನ್‌ಗೆ ಅಂಗಾಂಗ ಕಳ್ಳಸಾಗಣೆ ಮಾಡುತ್ತಿದ್ದ ಜಾಲಕ್ಕೆ ಕೇರಳ ಮೂಲದ ವ್ಯಕ್ತಿಯೇ ಕಿಂಗ್‌ಪಿನ್ ಎನ್ನುವುದು ಬಯಲಾದ ಬೆನ್ನಲ್ಲೇ, ಕರ್ನಾಟಕದಲ್ಲೂ ಈ ಜಾಲ ಹರಡಿದೆ ಎಂದು ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಿಂದ ತಿಳಿದುಬಂದಿದೆ.
ಮಧು ಜಯಕುಮಾರ್‌ನನ್ನು ವಶಕ್ಕೆ
ಆರೋಪಿ ಪಲರಿವಟ್ಟಂನ ವಟ್ಟತಿಪದಂನ ಮಧು ಜಯಕುಮಾರ್‌ನನ್ನು ವಶಕ್ಕೆ ಒಪ್ಪಿಸುವಂತೆ ಎನ್‌ಐಎ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಅದರಲ್ಲಿ, ಅಂಗಾಂಗ ದಾನಿಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದವರಾಗಿದ್ದು, ಅಂಗಾಗಗಳನ್ನು ಉತ್ತರ ಭಾರತದವರು ಸ್ವೀಕರಿಸುತ್ತಿದ್ದರು.
ಅಮಾಯಕರಿಗೆ ಹಣದ ಆಮಿಷವೊಡ್ಡಿ ಕಳ್ಳಸಾಗಣೆ
ಅಮಾಯಕರಿಗೆ ಹಣದ ಆಮಿಷವೊಡ್ಡಿ ಕಳ್ಳಸಾಗಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಪ್ರತಿ ಕಸಿಗೆ 50 ಲಕ್ಷ ರು. ಶುಲ್ಕ ವಿಧಿಸುತ್ತಿತ್ತು. ಬಳಿಕ ಕಿಡ್ನಿ ನೀಡುವಂತೆಯೂ ಒತ್ತಾಯಿಸಲಾಗುತ್ತಿತ್ತು ಎನ್ನಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))