ಯುಪಿಐ ಮೂಲಕವೇ ಬ್ಯಾಂಕ್‌ಗೆ ಹಣ ಕಟ್ಟಿ

| Published : Apr 06 2024, 12:46 AM IST / Updated: Apr 06 2024, 05:52 AM IST

ಸಾರಾಂಶ

ಹಣ ಪಾವತಿ ಮತ್ತು ಸ್ವೀಕೃತಿಯಲ್ಲಿ ಅತ್ಯಂತ ಜನಪ್ರಿಯ ಮಾರ್ಗವಾಗಿ ಹೊರಹೊಮ್ಮಿರುವ ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಅನ್ನು ಶೀಘ್ರವೇ, ಬ್ಯಾಂಕ್‌ಗಳಲ್ಲಿ ಹಣ ಜಮೆ ಮಾಡಲು ಬಳಸಲು ಅವಕಾಶ ನೀಡಲಾಗುವುದು ಎಂದು ಆರ್‌ಬಿಐ ಹೇಳಿದೆ.

ನವದೆಹಲಿ: ಹಣ ಪಾವತಿ ಮತ್ತು ಸ್ವೀಕೃತಿಯಲ್ಲಿ ಅತ್ಯಂತ ಜನಪ್ರಿಯ ಮಾರ್ಗವಾಗಿ ಹೊರಹೊಮ್ಮಿರುವ ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಅನ್ನು ಶೀಘ್ರವೇ, ಬ್ಯಾಂಕ್‌ಗಳಲ್ಲಿ ಹಣ ಜಮೆ ಮಾಡಲು ಬಳಸಲು ಅವಕಾಶ ನೀಡಲಾಗುವುದು ಎಂದು ಆರ್‌ಬಿಐ ಹೇಳಿದೆ.

ಪ್ರಸಕ್ತ ಎಟಿಎಂಗಳಲ್ಲಿ ಇರುವ ಕ್ಯಾಶ್‌ ಡೆಪಾಸಿಟ್‌ ಮಷಿನ್‌ (ಸಿಡಿಎಂ)ಗಳಲ್ಲಿ ಡೆಬಿಟ್‌ ಕಾರ್ಡ್‌ ಬಳಸಿ ಹಣ ಜಮೆ ಮಾಡಬಹುದಾಗಿದೆ. ಈ ಸೇವೆಯನ್ನು ಶೀಘ್ರ ಯುಪಿಐ ಮೂಲಕವೇ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದರ ನಿರ್ವಹಣೆ ಕುರಿತ ಮಾಹಿತಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಮಾಹಿತಿ ನೀಡಿದ್ದಾರೆ.

ಜೊತೆಗೆ, ಥರ್ಡ್‌ ಪಾರ್ಟಿ ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ)ಗೆ ಪ್ರೀಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರುಮೆಂಟ್‌ (ಪಿಪಿಐ) ಲಿಂಕ್‌ ಮಾಡಲು ಅವಕಾಶ ನೀಡಲೂ ಆರ್‌ಬಿಐ ನಿರ್ಧರಿಸಿದೆ.