ಸಾರಾಂಶ
ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಹಣ ಪತ್ತೆ ಪ್ರಕರಣದ ವರದಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ಸಲ್ಲಿಸಿದ್ದು, ನ್ಯಾ। ವರ್ಮಾ ಮನೆಯಲ್ಲಿ ಅವರ ಮನೆಯಲ್ಲಿ ಹಣ ಸಿಕ್ಕಿದ್ದು ನಿಜ ಎಂದು ದೃಢಪಡಿಸಿದೆ.
ನವದೆಹಲಿ: ಆಗ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ಆಗಿದ್ದ ಹಾಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆ ಪ್ರಕರಣದ ವರದಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ಸಲ್ಲಿಸಿದ್ದು, ನ್ಯಾ। ವರ್ಮಾ ಮನೆಯಲ್ಲಿ ಅವರ ಮನೆಯಲ್ಲಿ ಹಣ ಸಿಕ್ಕಿದ್ದು ನಿಜ ಎಂದು ದೃಢಪಡಿಸಿದೆ.
ನ್ಯಾ। ವರ್ಮಾ ದೆಹಲಿ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಐ ಸಂಜೀವ್ ಖನ್ನಾ ಅವರು ಕರ್ನಾಟಕ ಹೈಕೋರ್ಟ್ ನ್ಯಾ। ಅನು ಶಿವರಾಮನ್ ಸೇರಿದಂತೆ 3 ಜಡ್ಜ್‌ಗಳ ಸಮಿತಿ ರಚಿಸಿ ತನಿಖೆಗೆ ಆದೇಶಿಸಿತ್ತು. ಈ ಸಮಿತಿಯು ಮೇ 3ರಂದು ವಿಚಾರಣೆ ಅಂತಿಮಗೊಳಿಸಿ ಸಿಜೆಐಗೆ ವರದಿ ಸಲ್ಲಿಸಿದೆ. ಅದರಲ್ಲಿ ತ್ರಿಸದಸ್ಯ ಸಮಿತಿಯು ಸುಮಾರು 50ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿದೆ.
ಅದರ ಆಧಾರದಲ್ಲಿ ನ್ಯಾ। ವರ್ಮಾ ನಿವಾಸದಲ್ಲಿ ಹಣ ಸಿಕ್ಕಿರುವುದಕ್ಕೆ ಸಮಿತಿಗೆ ಸ್ಪಷ್ಟ ಪುರಾವೆಗಳು ಸಿಕ್ಕಿದ್ದು ಇದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಿಜೆಐ ಸಂಜೀವ್ ಖನ್ನಾ ಅವರು ನ್ಯಾ। ವರ್ಮಾ ಅವರಿಗೆ ಈ ವರದಿಗಳನ್ನು ಕಳುಹಿಸಿ , ಸ್ಪಷ್ಟನೆ ಕೇಳಿದ್ದಾರೆ.