ಸಾರಾಂಶ
ಕಳೆದ ಶನಿವಾರದಿಂದ ಆರಂಭವಾಗಿರುವ 10 ಮತ್ತು 12ನೇ ತರಗತಿ ಅಂತಿಮ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಜಾಲತಾಣದಲ್ಲಿ ಹಬ್ಬಿರುವ ವರದಿಗಳು ಪೂರ್ಣ ಸುಳ್ಳು ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪಷ್ಟಪಡಿಸಿದೆ.
ನವದೆಹಲಿ: ಕಳೆದ ಶನಿವಾರದಿಂದ ಆರಂಭವಾಗಿರುವ 10 ಮತ್ತು 12ನೇ ತರಗತಿ ಅಂತಿಮ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಜಾಲತಾಣದಲ್ಲಿ ಹಬ್ಬಿರುವ ವರದಿಗಳು ಪೂರ್ಣ ಸುಳ್ಳು ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪಷ್ಟಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಿಬಿಎಸ್‌ಇ, ಜಾಲತಾಣದಲ್ಲಿ ಈ ಕುರಿತ ವರದಿಗಳನ್ನು ನಾವು ಪರಿಶೀಲಿಸಿದ್ದೇವೆ. ಆದರೆ ಇವೆಲ್ಲಾ ಸುಳ್ಳು. ಇಂಥ ಸುದ್ದಿಗಳ ಬಗ್ಗೆ ಪೋಷಕರು ಜಾಗೃತರಾಗಿರಬೇಕು. ಪರೀಕ್ಷಾ ಪ್ರಕ್ರಿಯೆಗಳನ್ನು ಹಾಳುಮಾಡುವ ಇಂಥ ಸುಳ್ಳು ಸುದ್ದಿಗಳ ಬಗ್ಗೆ ಗಮನ ನೀಡದಂತೆ ಮಕ್ಕಳಿಗೆ ಪೋಷಕರು ತಿಳಿಹೇಳಬೇಕು ಎಂದು ಮನವಿ ಮಾಡಿದೆ.
ಜೊತೆಗೆ ಇಂತ ವಿಷಯಗಳ ಬಗ್ಗೆ ಇಂಥ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಳು ಫೆ.15ರಂದು ಆರಂಭವಾಗಿದ್ದು ಏ.4ರವರೆಗೂ ನಡೆಯಲಿದೆ.