ಸಾರಾಂಶ
: 2025ನೇ ಸಾಲಿನ ಕೇಂದ್ರೀಯ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) 10,12 ತರಗತಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಸಲಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು, ಬಾಲಕಿಯರೇ ಎಂದಿನಂತೆ ಮೇಲುಗೈ ಸಾಧಿಸಿದ್ದಾರೆ.
- 12ನೇ ಕ್ಲಾಸ್ ವಿಜಯವಾಡ, 10 ಕ್ಲಾಸ್ ತಿರುವನಂತಪುರಂ, ವಿಜಯವಾಡ ಫಸ್ಟ್
ನವೆದಹಲಿ: 2025ನೇ ಸಾಲಿನ ಕೇಂದ್ರೀಯ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) 10,12 ತರಗತಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಸಲಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು, ಬಾಲಕಿಯರೇ ಎಂದಿನಂತೆ ಮೇಲುಗೈ ಸಾಧಿಸಿದ್ದಾರೆ.ಸಿಬಿಎಸ್‌ಇ 12 ತರಗತಿಯಲ್ಲಿ ಶೇ.88.39 ಫಲಿತಾಂಶ ದಾಖಲಾಗಿದ್ದು, ಬಾಲಕರಿಗಿಂತ ಶೇ.5.94ರಷ್ಟು ಹೆಚ್ಚು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ.87.98ರಷ್ಟಿತ್ತು. ಇನ್ನು 10ನೇ ತರಗತಿಯಲ್ಲಿ ಶೇ.93.66 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕಳೆದ ವರ್ಷ ಶೇ.93.60ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಬಾಲಕರಿಗಿಂತ ಶೇ.2.37ರಷ್ಟು ಬಾಲಕಿಯರು ಪಾಸ್ ಆಗಿದ್ದಾರೆ,
10ನೇ ತರಗತಿ ಫಲಿತಾಂಶ ತಿರುವನಂತಪುರಂ ಮತ್ತಯ ವಿಜಯವಾಡ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು ನಂತರದ ಸ್ಥಾನದಲ್ಲಿದೆ. ಗುವಾಹಟಿ ಕೊನೆಯ ಸ್ಥಾನದಲ್ಲಿದೆ. 12ನೇ ತರಗತಿ ಫಲಿತಾಂಶದಲ್ಲಿ ವಿಜಯವಾಡ ಪ್ರಥಮ ಸ್ಥಾನದಲ್ಲಿದ್ದು, ತಿರುವನಂತಪುರಂ ನಂತರದ ಸ್ಥಾನದಲ್ಲಿದೆ. ಪ್ರಯಾಗ್ ರಾಜ್ ಕೊನೆಯ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ನಾಲ್ಕನೆಯ ಸ್ಥಾನದಲ್ಲಿದೆ, ಎರಡೂ ತರಗತಿಗಳ ಪೂರಕ ಪರೀಕ್ಷೆ ಜುಲೈನಲ್ಲಿ ನಡೆಯಲಿದೆ.ಮೆರಿಟ್ ಲಿಸ್ಟ್ ಇಲ್ಲ:
ಇನ್ನು ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು ಈ ಹಿಂದಿನ ನಿರ್ಧಾರದಂತೆ ಸಿಬಿಎಸ್ಇ ಫಲಿತಾಂಶದಲ್ಲಿ ಯಾವುದೇ ಮೆರಿಟ್ ಲಿಸ್ಟ್ ಮತ್ತು ರ್‍ಯಾಂಕ್‌ಗಳನ್ನು ಪ್ರಕಟಿಸಿಲ್ಲ. ಪ್ರಥಮ , ದ್ವಿತೀಯ, ತೃತೀಯ ದರ್ಜೆಗಳನ್ನು ವಿದ್ಯಾರ್ಥಿಗಳಿಗೆ ನೀಡಿಲ್ಲ.