ಸಾರಾಂಶ
ಕರ್ನಾಟಕದಲ್ಲಷ್ಟೇ ಅಲ್ಲ, ನೆರೆಯ ರಾಜ್ಯ ಕೇರಳದಲ್ಲೂ ತೆಂಗಿನ ಕಾಯಿ ಬೆಲೆ ಗಗನಕ್ಕೇರಿದ್ದು, ಹೀಗಾಗಿ ರಾಜ್ಯದ ಕಲ್ಲಿಕೋಟೆಯ ಗ್ರಾಮವೊಂದರಲ್ಲಿ ಖದೀಮರು ತೆಂಗಿನ ಕಾಯಿಗಳನ್ನೇ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
- ಕಳ್ಳರಿಂದ ತೆಂಗಿನ ಕಾಯಿ ರಕ್ಷಣೆಗೆ ರೈತರ ಉಪಾಯ
- ತೆಂಗಿನ ಕಾಯಿ ಬೆಲೆ 80 ರು.ಗೆ ಏರಿದ ಬೆನ್ನಲ್ಲೇ ಹೆಚ್ಚಿದ ಕಳ್ಳತನ===
ಅಮೆರಿಕದ ಉತ್ಪನ್ನಗಳಿಗೆ ಇಂಡೋನೇಷ್ಯಾದ ಮಾರುಕಟ್ಟೆ ಸಂಪೂರ್ಣ ಮುಕ್ತಕರ್ನಾಟಕದಂತೆ ನೆರೆಯ ಕೇರಳದಲ್ಲೂ ತೆಂಗಿನ ಕಾಯಿ ದರ ಒಂದಕ್ಕೆ 80 ರು.ಗೆ
ಈ ಹಿನ್ನೆಲೆಯಲ್ಲಿ ತೋಟಗಳಿಂದ ಕಾಯಿ ಕಳ್ಳತನ ಪ್ರಕರಣಗಳಲ್ಲಿ ಭಾರೀ ಏರಿಕೆಇದನ್ನು ತಡೆಯಲು ತೆಂಗಿನ ತೋಟಗಳಿಗೆ ಸಿಸಿಟೀಟಿ ಅಳವಡಿಸುತ್ತಿರುವ ರೈತರು
ರಸ್ತೆಯಲ್ಲಿ ಕಾಯಿ ಮಾರುವವವರಿಗೆ ಕಾಯಿ ರಕ್ಷಣೆ ಕುರಿತು ಪೊಲಿಸರಿಂದ ಸಲಹೆ===ತಿರುವನಂತಪುರಂ: ಕರ್ನಾಟಕದಲ್ಲಷ್ಟೇ ಅಲ್ಲ, ನೆರೆಯ ರಾಜ್ಯ ಕೇರಳದಲ್ಲೂ ತೆಂಗಿನ ಕಾಯಿ ಬೆಲೆ ಗಗನಕ್ಕೇರಿದ್ದು, ಹೀಗಾಗಿ ರಾಜ್ಯದ ಕಲ್ಲಿಕೋಟೆಯ ಗ್ರಾಮವೊಂದರಲ್ಲಿ ಖದೀಮರು ತೆಂಗಿನ ಕಾಯಿಗಳನ್ನೇ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹಿಮದೆ ಇಲ್ಲಿ ತೆಂಗಿನ ಕಾಯಿಯ ಬೆಲೆ ಕೇಜಿಗೆ 30 ರು. ನಷ್ಟಿತ್ತು. ಆದರೆ ಏಕಾಏಕಿ 80 ರು.ಗೆ ಏರಿಕೆ ಕಂಡಿರುವುದರಿಂದ ಖದೀಮರು ಕಳ್ಳತನದ ಹಾದಿ ಹಿಡಿದಿದ್ದಾರೆ. ನಿರಂತರವಾಗಿ ಗ್ರಾಮದಲ್ಲಿ ತೆಂಗಿನ ಕಾಯಿಗಳ ಕಳ್ಳತನಕ್ಕೆ ಬೇಸತ್ತ ಅಂಗಡಿಗಳು ಹಾಗೂ ತೋಟಗಳ ಮಾಲೀಕರು ತಮ್ಮ ಜಾಗದಲ್ಲಿ ಸಿಸಿಟೀವಿಗಳನ್ನು ಕೂಡ ಅಳವಡಿಸಿದ್ದಾರೆ. ಮಾತ್ರವಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಸ್ಥಳೀಯ ಪೊಲೀಸರಿಗೆ 500 ತೆಂಗಿನಕಾಯಿ ತನಕ ಕಳವಾಗಿದೆ ಎಂದು ಸುಮಾರು 5 ದೂರುಗಳು ಬಂದಿವೆ.ಹೀಗಾಗಿ ಪೊಲೀಸರು ಅಂಗಡಿಕಾರರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ತೆಂಗಿನಕಾಯಿಗಳನ್ನು ಅಂಗಡಿಗಳ ಒಳಗೇ ಸುರಕ್ಷಿತವಾಗಿ ಇರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ತಳ್ಳು ಗಾಡಿಯಲ್ಲಿ ತೆಂಗಿನಕಾಯಿ ಮಾರುವವರು ಸದಾ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.