ಮೋದಿ ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ ಬಂಪರ್‌ ಕೊಡುಗೆ

| Published : Jun 20 2024, 01:03 AM IST / Updated: Jun 20 2024, 04:32 AM IST

ಮೋದಿ ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ ಬಂಪರ್‌ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಭತ್ತ, ರಾಗಿ, ತೊಗರಿ, ಹತ್ತಿ, ಶೇಂಗಾ ಬೆಂಬಲ ಬೆಲೆ ಭರ್ಜರಿ ಏರಿಕೆಯಾಗಿದ್ದು, ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

 ನವದೆಹಲಿ :  ನರೇಂದ್ರ ಮೋದಿ ಸರ್ಕಾರ 3ನೇ ಬಾರಿ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ರೈತರಿಗೆ ಬುಧವಾರ ಬಂಪರ್ ಕೊಡುಗೆ ನೀಡಿದೆ. - ಭತ್ತ, ರಾಗಿ, ತೊಗರಿ, ಹತ್ತಿ, ಶೇಂಗಾ ಸೇರಿದಂತೆ 17 ಧಾನ್ಯಗಳು/ಬೆಳೆಗಳ ಬೆಂಬಲ ಬೆಲೆಯನ್ನು ಭರ್ಜರಿ ಏರಿಕೆ ಮಾಡಿದೆ.

ಎಂಎಸ್‌ಪಿ ಹೆಚ್ಚಳವನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ 14 ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಮೋದಿ ಅಧ್ಯಕ್ಷತೆಯ ಸಂಪುಟ ಅನುಮೋದಿಸಿದೆ ಎಂದು ಹೇಳಿದರು.

ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯಂತಹ ರಾಜ್ಯಗಳ ಚುನಾವಣೆಗಳು ವರ್ಷಾಂತ್ಯಕ್ಕೆ ನಡೆಯಲಿದ್ದು, ಈ ಬೆಳೆಗಳನ್ನು ಈ ರಾಜ್ಯಗಳಲ್ಲೇ ಹೆಚ್ಚು ಬೆಳೆಯಲಾಗುತ್ತದೆ ಎಂಬುದು ಗಮನಾರ್ಹ. ಮುಂಚಿತವಾಗಿ ಗಮನಾರ್ಹವಾಗಿದೆ.

ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಶೇ.5.35 ರಷ್ಟು ಅಂದರೆ ಕ್ವಿಂಟಲ್‌ಗೆ 117 ರು.ನಷ್ಟು ಹೆಚ್ಚಿಸಿ ಕ್ವಿಂಟಲ್‌ಗೆ 2,300 ರು,ಗೆ ಏರಿಸಲಾಗಿದೆ. ಸರ್ಕಾರವು ಹೆಚ್ಚುವರಿ ಅಕ್ಕಿ ದಾಸ್ತಾನು ಹೊಂದಿದ್ದರೂ ಭತ್ತದ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಇನ್ನು ರಾಗಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 444 ರು., ಮೆಕ್ಕೆಜೋಳವನ್ನು 135 ರು., ತೊಗರಿಬೇಳೆಯನ್ನನು 550 ರು., ಹೆಸರುಬೇಳೆಯನ್ನು 124 ರು., ಉದ್ದಿನ ಬೇಳೆಯನ್ನು 450 ರು., ಶೇಂಗಾ 406 ರು., ಸೋಯಾಬೀನ್‌ 292 ರು., ಸೂರ್ಯಕಾಂತಿ ಬೀಜ 520 ರು. ಹಾಗೂ ಹತ್ತಿಯನ್ನು 501 ರು. ನಷ್ಟು ಹೆಚ್ಚಿಸಲಾಗಿದೆ. 2018ರ ಕೇಂದ್ರ ಬಜೆಟ್‌ನಲ್ಲಿ ಬೆಂಬಲ ಬೆಲೆಯು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಇರಬೇಕು ಎಂದು ಸರ್ಕಾರವು ಸ್ಪಷ್ಟವಾದ ನೀತಿ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಇತ್ತೀಚಿನ ಬೆಂಬಲ ಬೆಲೆ ಹೆಚ್ಚಳದಲ್ಲಿ ಈ ತತ್ವವನ್ನು ಅನುಸರಿಸಲಾಗಿದೆ ಎಂದು ವೈಷ್ಣವ್ ಹೇಳಿದರು. ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಲಾಗಿದೆ ಎಂದು ಅವರು ಹೇಳಿದರು.

ಭಾರತೀಯ ಆಹಾರ ನಿಗಮವು ಪ್ರಸ್ತುತ ಸುಮಾರು 53.4 ಮಿಲಿಯನ್ ಟನ್‌ಗಳಷ್ಟು ಅಕ್ಕಿಯ ದಾಸ್ತಾನು ಹೊಂದಿದೆ, ಇದು ಜುಲೈ 1ಕ್ಕೆ ಅಗತ್ಯವಿರುವ ಬಫರ್‌ಗಿಂತ 4 ಪಟ್ಟು ಹೆಚ್ಚು. ಯಾವುದೇ ತಾಜಾ ಸಂಗ್ರಹಣೆಯಿಲ್ಲದೆ 1 ವರ್ಷದವರೆಗೆ ಕಲ್ಯಾಣ ಯೋಜನೆಗಳಿಗೆ ನೀಡಲು ಇದು ಸಾಕಾಗುತ್ತದೆ

--ಬೆಂಬಲ ಬೆಲೆ (ಕ್ವಿಂಟಲ್‌ಗೆ)ಬೆಳೆ ಪರಿಷ್ಕೃತ ಬೆಂಬಲ ಬೆಲೆ ಏರಿಕೆ ಪ್ರಮಾಣ ಭತ್ತ ₹2300  - 117

ಜೋಳ ₹3371 - 191 ರಾಗಿ ₹4290 - 444  ಮೆಕ್ಕೆಜೋಳ  ₹2225 - 135  ತೊಗರಿ ಬೇಳೆ  ₹7550 - 550  ಹೆಸರು ಬೇಳೆ  ₹8682 -124  

ಉದ್ದಿನ ಬೇಳೆ  ₹7400  - 450  ಶೇಂಗಾ  6783 - 406  ಸೋಯಾ  4892 - 292  ಹತ್ತಿ7121 - 501