ಸಾರಾಂಶ
ಸಿಎಎ ಅರ್ಜಿ ಸಲ್ಲಿಸುವಾಗ ಉಂಟಾಗುವ ಕುಂದುಕೊರತೆಗಳನ್ನು ನಿವಾರಿಸಲು ಸರ್ಕಾರ ಸಹಾಯವಾಣಿಯನ್ನು ಆರಂಭಿಸಲಿದೆ ಎನ್ನಲಾಗಿದೆ.
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಅಡಿಯಲ್ಲಿ ಭಾರತದ ಪೌರತ್ವ ಪಡೆಯುವ ಅರ್ಹತೆಯನ್ನು ಹೊಂದಿರುವ ಜನರಿಗಾಗಿ ಮಂಗಳವಾರ ವೆಬ್‌ಸೈಟ್ ಪೋರ್ಟಲ್ ಆರಂಭಿಸಿದ ಗೃಹ ಸಚಿವಾಲಯ, ಇದೀಗ ಅರ್ಜಿದಾರರ ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಲು ನಿರ್ಧರಿಸಿದೆ.
ಶೀಘ್ರದಲ್ಲೇ ಸಹಾಯವಾಣಿ ನಂಬರ್ ಜಾರಿಗೆ ಬರಲಿದ್ದು, ಇದರ ಸೇವೆ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ಲಭ್ಯವಿರಲಿದೆ. ಅರ್ಜಿದಾರು ಭಾರತದಲ್ಲಿ ಎಲ್ಲಿಂದಲಾದರೂ ಕರೆ ಮಾಡಬುದು ಎಂದು ಗೃಹ ಸಚಿವಾಲಯ ತಿಳಿಸಿದೆ.