35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ

| N/A | Published : Aug 05 2025, 12:30 AM IST / Updated: Aug 05 2025, 04:51 AM IST

ಸಾರಾಂಶ

ಕೆಲ ಅತ್ಯಗತ್ಯ ಔಷಧಿಗಳ ಬೆಲೆಯನ್ನು ಕಡಿಮೆ ಗೊಳಿಸಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಘೋಷಿಸಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಹೊರಡಿಸಿದ ಬೆಲೆ ನಿಗದಿ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ.

ನವದೆಹಲಿ: ಕೆಲ ಅತ್ಯಗತ್ಯ ಔಷಧಿಗಳ ಬೆಲೆಯನ್ನು ಕಡಿಮೆ ಗೊಳಿಸಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಘೋಷಿಸಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಹೊರಡಿಸಿದ ಬೆಲೆ ನಿಗದಿ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ.  

ಬೆಲೆ ಬದಲಾವಣೆಯ ಅನ್ವಯ, ಅಸೆಕ್ಲೋಫೆನಾಕ್, ಪ್ಯಾರಸಿಟಮಾಲ್ ಮತ್ತು ಟ್ರಿಪ್ಸಿನ್ ಕೈಮೊಟ್ರಿಪ್ಸಿನ್ ಅಂಶಗಳುಳ್ಳ, ಕುಮ್ಸ್ ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ತಯಾರಿಸಿ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಮಾರಾಟ ಮಾಡಿದ ಔಷಧಿಗೆ 13 ರು., ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್‌ನ ಅದೇ ಔಷಧಿಗೆ 15.01 ರು. ನಿಗದಿಪಡಿಸಲಾಗಿದೆ. 

ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಅಟೋರ್ವಾಸ್ಟಾಟಿನ್(40 ಮಿಗ್ರಾಂ) ಮತ್ತು ಕ್ಲೋಪಿಡೋಗ್ರೆಲ್ (75 ಮಿಗ್ರಾಂ)ಗೆ 25.61 ರು. ಆಗಿದೆ. ಮಕ್ಕಳಿಗೆ ಕೊಡುವ ದ್ರವ ರೂಪದ ಮದ್ದುಗಳು, ವಿಟಮಿನ್-ಡಿ ಕೊರತೆ ನೀಗಿಸುವ ಔಷಧಿಗಳಿಗೆ ಪ್ರತಿ ಮಿಲಿಗೆ 31.77 ರು. ಆಗಿದೆ.

Read more Articles on