ತಮಿಳುನಾಡಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಪರೀಕ್ಷೆ ವಿರೋಧಿ ವಿಧೇಯಕ ರಾಷ್ಟ್ರಪತಿಗಳಿಂದ ತಿರಸ್ಕಾರ

| N/A | Published : Apr 05 2025, 12:50 AM IST / Updated: Apr 05 2025, 05:48 AM IST

Tamil Nadu CM MK Stalin (Photo/ANI)
ತಮಿಳುನಾಡಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಪರೀಕ್ಷೆ ವಿರೋಧಿ ವಿಧೇಯಕ ರಾಷ್ಟ್ರಪತಿಗಳಿಂದ ತಿರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ವಿಚಾರದಲ್ಲಿ ತಮಿಳುನಾಡಿಗೆ ಭಾರೀ ಹಿನ್ನಡೆಯಾಗಿದೆ. ನೀಟ್‌ ಪರೀಕ್ಷೆಯಿಂದ ತಮಿಳುನಾಡನ್ನು ಹೊರಗಿಡುವಂತೆ ಕೋರಿ ಎಂ.ಕೆ.ಸ್ಟಾಲಿನ್‌ ನೇತೃತ್ವದ ಸರ್ಕಾರ ಅಂಗೀಕರಿಸಿದ್ದ ನಿರ್ಣಯವನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.

ಚೆನ್ನೈ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ವಿಚಾರದಲ್ಲಿ ತಮಿಳುನಾಡಿಗೆ ಭಾರೀ ಹಿನ್ನಡೆಯಾಗಿದೆ. ನೀಟ್‌ ಪರೀಕ್ಷೆಯಿಂದ ತಮಿಳುನಾಡನ್ನು ಹೊರಗಿಡುವಂತೆ ಕೋರಿ ಎಂ.ಕೆ.ಸ್ಟಾಲಿನ್‌ ನೇತೃತ್ವದ ಸರ್ಕಾರ ಅಂಗೀಕರಿಸಿದ್ದ ನಿರ್ಣಯವನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.

ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಸ್ಟಾಲಿನ್‌ ಅವರೇ ವಿಧಾನಸಭೆಗೆ ತಿಳಿಸಿದ್ದಾರೆ. ಆದರೂ ರಾಜ್ಯ ಸರ್ಕಾರ ನೀಟ್‌ ಎಕ್ಸಾಂ ವಿರುದ್ಧದ ತನ್ನ ಹೋರಾಟ ಮುಂದುವರಿಸುವುದಾಗಿ ಘೋಷಿಸಿರುವ ಸ್ಟಾಲಿನ್‌, ಈ ಸಂಬಂಧ ಏ.9ರಂದು ತಮಿಳುನಾಡಿನಲ್ಲಿ ಸರ್ವ ಪಕ್ಷಗಳ ಸಭೆಯನ್ನೂ ಕರೆದಿದ್ದಾರೆ.

ನೀಟ್‌ ಪರೀಕ್ಷೆಗೆ ಸಂಬಂಧಿಸಿದ ನಿರ್ಣಯ ತಿರಸ್ಕರಿಸುವ ನಿರ್ಧಾರವನ್ನು ಒಕ್ಕೂಟ ವ್ಯವಸ್ಥೆಯ ಕರಾಳ ಅಧ್ಯಾಯ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರ ತಮಿಳುನಾಡು ಜನರ ಮತ್ತು ಇಲ್ಲಿನ ವಿಧೇಯಕವನ್ನು ಕಡೆಗಣಿಸಿದೆ ಎಂದು ಕಿಡಿಕಾರಿದರು.

ತಮಿಳುನಾಡು ಸರ್ಕಾರ ವಿವಿಧ ಸಚಿವರ ಮೂಲಕ ಅಗತ್ಯ ಸ್ಪಷ್ಟೀಕರಣ ನೀಡಿದರೂ ನೀಟ್‌ನಿಂದ ತಮಿಳುನಾಡಿಗೆ ವಿನಾಯ್ತಿ ನೀಡಲು ನಿರಾಕರಿಸಿದೆ ಎಂದರು.