ಮಧ್ಯಪ್ರಾಚ್ಯ ಕದನದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದ್ದ ಎಲ್ಪಿಜಿ ಬುಕಿಂಗ್ ಅವಧಿಯನ್ನು ಕೇಂದ್ರ ಸರ್ಕಾರ ಪುನಃ 25 ದಿನಗಳಿಗೆ ಇಳಿಸಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಸೋಮವಾರ ಮಾಹಿತಿ ನೀಡಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ಹಿಂದಿನಂತೆ ಬುಕ್ಕಿಂಗ್ ಅವಧಿ 25 ದಿನವೇ ಉಳಿಯಲಿದೆ.
ತಿರುವನಂತಪುರಂ : ಮಧ್ಯಪ್ರಾಚ್ಯ ಕದನದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದ್ದ ಎಲ್ಪಿಜಿ ಬುಕಿಂಗ್ ಅವಧಿಯನ್ನು ಕೇಂದ್ರ ಸರ್ಕಾರ ಪುನಃ 25 ದಿನಗಳಿಗೆ ಇಳಿಸಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಸೋಮವಾರ ಮಾಹಿತಿ ನೀಡಿದ್ದಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ಹಿಂದಿನಂತೆ ಬುಕ್ಕಿಂಗ್ ಅವಧಿ 25 ದಿನವೇ ಉಳಿಯಲಿದೆ.
ಅಮೆರಿಕ ಮತ್ತು ಇರಾನ್ ಕದನ
ಅಮೆರಿಕ ಮತ್ತು ಇರಾನ್ ಕದನದ ಹಿನ್ನೆಲೆಯಲ್ಲಿ ಎಲ್ಪಿಜಿ ಪೂರೈಕೆ ಸ್ಥಗಿತಗೊಂಡು ಕೇಂದ್ರ ಸರ್ಕಾರ ಬುಕಿಂಗ್ ಮೇಲೆ ಕಡಿವಾಣ ಹೇರಿತ್ತು. ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಬುಕಿಂಗ್ ಅವಧಿಯನ್ನು ನಿಗದಿಪಡಿಸಲಾಗಿತ್ತು.
ಇದೀಗ ಎಲ್ಪಿಜಿ ಪೂರೈಕೆ ಸಹಜ ಸ್ಥಿತಿಗೆ
ಇದೀಗ ಎಲ್ಪಿಜಿ ಪೂರೈಕೆ ಸಹಜ ಸ್ಥಿತಿಗೆ ಬಂದಿದೆ. ಹೀಗಾಗಿ ಸರ್ಕಾರ ಈ ನಿಯಮವನ್ನು ಸಡಿಲಗೊಳಿಸಿದ್ದು, ಎಲ್ಲಾ ಪ್ರದೇಶಗಳಲ್ಲೂ ಸಮಾನಾಂತರವಾಗಿ 25 ದಿನಗಳ ಬುಕಿಂಗ್ ಜಾರಿಗೊಳಿಸಿದೆ ಎಂದು ಗೋಪಿ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
