ಸಾರಾಂಶ
ನನಗೆ ಕೋವಿಡ್ ಸೋಂಕು ತಗುಲಿದಾಗ ಪ್ರಧಾನಿ ಮೋದಿ ನನ್ನನ್ನು ವಿಚಾರಿಸಿ ನನಗೆ ಆಯುಷ್ ವೈದ್ಯರನ್ನು ಗೊತ್ತು ಮಾಡುವ ಮೂಲಕ ಸೋಂಕಿನಿಂದ ಬೇಗ ಗುಣಮುಖವಾಗಲು ನೆರವು ನೀಡಿದ್ದಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ನವದೆಹಲಿ: ತಮಗೆ ಕೊರೋನಾ ಸೋಂಕು ತಗುಲಿದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ತಮಗೆ ಆಯುಷ್ ವೈದ್ಯರೊಬ್ಬರನ್ನು ಗುರುತಿಸಿ ಚಿಕಿತ್ಸೆಗೆ ನೆರವಾಗಿದ್ದರು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ತಿಳಿಸಿದರು.
ಸುಪ್ರೀಂಕೋರ್ಟ್ ಪ್ರಾಂಗಣದಲ್ಲಿ ಆಯುಷ್ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ, ‘ಪ್ರಧಾನಿ ನರೇಂದ್ರ ಮೋದಿ ತೋರಿಸಿದ ವೈದ್ಯರ ಸಲಹೆಯಂತೆ ನಾನು ಔಷಧಿ ಪಡೆದು ಶೀಘ್ರ ಗುಣಮುಖನಾದೆ.ನಂತರ ನನಗೆ ಆಂಗ್ಲ ಪದ್ಧತಿಯ ಔಷಧಿ ತೆಗೆದುಕೊಳ್ಳುವ ಪ್ರಮೇಯವೇ ಬರಲಿಲ್ಲ.
ಅಲ್ಲದೆ ನಾನು ಪ್ರತಿದಿನ ಯೋಗ ಅಭ್ಯಾಸ ಮಾಡುತ್ತಿದ್ದು, ಎಲ್ಲ ನ್ಯಾಯಾಲಯ ಸಿಬ್ಬಂದಿಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು.