ಸಾರಾಂಶ
ನಾಲ್ಕು ಪವಿತ್ರ ದೇಗುಲಗಳ ದರ್ಶನ ಭಾಗ್ಯ ಕಲ್ಪಿಸುವ ಚಾರ್‌ಧಾಮ್ ಯಾತ್ರೆಗೆ ಮೇ 10ರಂದು ಚಾಲನೆ ಸಿಕ್ಕಿದ್ದು, ಆರಂಭದಲ್ಲೇ ಯಾತ್ರಾ ಸ್ಥಳ ಜನದಟ್ಟಣೆಯ ಸಮಸ್ಯೆಗೆ ತುತ್ತಾಗಿದೆ.
ಡೆಹ್ರಾಡೂನ್: ನಾಲ್ಕು ಪವಿತ್ರ ದೇಗುಲಗಳ ದರ್ಶನ ಭಾಗ್ಯ ಕಲ್ಪಿಸುವ ಚಾರ್‌ಧಾಮ್ ಯಾತ್ರೆಗೆ ಮೇ 10ರಂದು ಚಾಲನೆ ಸಿಕ್ಕಿದ್ದು, ಆರಂಭದಲ್ಲೇ ಯಾತ್ರಾ ಸ್ಥಳ ಜನದಟ್ಟಣೆಯ ಸಮಸ್ಯೆಗೆ ತುತ್ತಾಗಿದೆ.
ಕೇದಾರನಾಥ್, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಚಾರ್‌ಧಾಮ್ ಯಾತ್ರೆಯ ಸ್ಥಳವಾಗಿದೆ. ಈ ಪೈಕಿ ಯಮುನೋತ್ರಿಗೆ ತೆರಳುವ ಕಾಲುದಾರಿಯಲ್ಲಿ ಏಕಾಏಕಿ ಸಾವಿರಾರು ಭಕ್ತರು ಆಗಮಿಸಿದ ಕಾರಣ ಅಲ್ಲಿ ಟ್ರಾಫಿಕ್ ಜಾಮ್ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು, ಡೋಲಿಯಲ್ಲಿ ಜನರನ್ನು ಕರೆದೊಯ್ಯುವವರು, ಕುದುರೆ ಮೇಲೆ ಜನರನ್ನು ಕರೆದೊಯ್ಯುವರು ಒಬ್ಬರಿಗೆ ಒಬ್ಬರು ಅಂಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅವ್ಯವಸ್ಥೆ ಕುರಿತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಕಡಿದಾದ ದಾರಿಯಲ್ಲಿ ಜನರು ದಟ್ಟಣೆಯಲ್ಲಿ ಸಿಕ್ಕಿಬಿದ್ದಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಅದರ ಬೆನ್ನಲ್ಲೇ ಉತ್ತರಾಖಂಡ ಪೊಲೀಸರು ಚಾರ್‌ಧಾಮ್ ಯಾತ್ರೆಗೆ ಬರುವ ಭಕ್ತಾಧಿಗಳಿಗೆ ಯಾತ್ರೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ.